ಕರ್ನಾಟಕ

karnataka

ETV Bharat / state

ಪ್ರತಿಪಕ್ಷದವರಿಗೆ ಮಾಡಲು ಕೆಲಸವಿಲ್ಲ, ಸುಮ್ಮನೆ ಆರೋಪ ಮಾಡ್ತಿದ್ದಾರೆ: ಸಚಿವ ಚವ್ಹಾಣ್ - ಸಚಿವ ಪ್ರಭು ಚವ್ಹಾಣ್

ಕೊರೊ‌ನಾ ರಾಜ್ಯದಲ್ಲಿ ಪಕ್ಷಾತೀತವಾಗಿ ಎಲ್ಲರಿಗೂ ಬರುತ್ತಿದೆ. ಇದಕ್ಕೆ ಯಾವುದೇ ಬೇಧ-ಭಾವ ಇಲ್ಲ. ಪ್ರತಿಪಕ್ಷದವರಿಗೆ‌ ಮಾಡಲು ಕೆಲಸವಿಲ್ಲದೆ ಕೊರೊನಾದಲ್ಲಿ ಹಗರಣವಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಪ್ರಭು ಚವ್ಹಾಣ್ ಆಕ್ರೋಶ ವ್ಯಕ್ತಪಡಿಸಿದರು.

minister-prabhu-chavan
ಸಚಿವ ಪ್ರಭು ಚವ್ಹಾಣ್

By

Published : Jul 8, 2020, 1:12 AM IST

ಕೋಲಾರ: ಕೊರೊನಾದ ಪಿಪಿಇ ಕಿಟ್ ಸೇರಿದಂತೆ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಹಗರಣವಾಗಿದೆ ಎಂದು ಹೇಳುವ ವಿರೋಧ‌ ಪಕ್ಷದವರಿಗೆ ಕೆಲಸವಿಲ್ಲ. ಹಾಗಾಗಿ ಅವರು‌ ಸುಮ್ಮನೆ ಮಾತನಾಡುತ್ತಿದ್ದಾರೆ‌ ಎಂದು ಪಶು ಸಂಗೋಪನೆ ಇಲಾಖೆ ಸಚಿವ ಪ್ರಭು ಚವ್ಹಾಣ್ ಕಿಡಿಕಾರಿದ್ರು.

ಸಚಿವ ಪ್ರಭು ಚವ್ಹಾಣ್

ಕೋಲಾರದ ಪಶುಸಂಗೋಪನೆ ಇಲಾಖೆಯಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯ ನಂತರ ಮಾಧ್ಯಮದವರೊಂದಿಗೆ‌ ಮಾತನಾಡಿದ ಅವರು, ಕೊರೊ‌ನಾ ರಾಜ್ಯದಲ್ಲಿ ಪಕ್ಷಾತೀತವಾಗಿ ಎಲ್ಲರಿಗೂ ಬರುತ್ತಿದೆ. ಇದಕ್ಕೆ ಯಾವುದೇ ಬೇಧ-ಭಾವ ಇಲ್ಲ. ಪ್ರತಿಪಕ್ಷದವರಿಗೆ‌ ಮಾಡಲು ಕೆಲಸವಿಲ್ಲದೆ ಹಗರಣವಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾ ಸಂದರ್ಭದಲ್ಲಿ ರಾಜ್ಯದಲ್ಲಿ ಎಲ್ಲಾ ಸಚಿವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಕೇಕೆ ಹಾಕುತ್ತಿದ್ದು, ಇದಕ್ಕೆ ಲಾಕ್‌ಡೌನ್ ಪರಿಹಾರ ಅಲ್ಲ. ನಮ್ಮ ಜೀವ‌ ನಮ್ಮ ಕೈಯಲ್ಲಿದೆ. ಕೊರೊನಾ ಬಗ್ಗೆ ಜನ್ರಲ್ಲಿ ಜಾಗೃತಿ ಬರಬೇಕಾಗಿದೆ ಎಂದು ತಿಳಿಸಿದ್ರು. ನಮಗೂ ಕೊರೊನಾ‌ ಬಗ್ಗೆ ಭಯವಿದೆ, ಆದ್ರೂ ನಾವು ಓಡಾಡುತ್ತಿದ್ದೇವೆ. ಜನ್ರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇವೆ ಎಂದರು.

‌ಇನ್ನು ಪಶು ಇಲಾಖೆಯಲ್ಲಿ ಸಿಬ್ಬಂದಿ ಮತ್ತು ಔಷಧಿ‌ ಕೊರತೆ‌ ಇದೆ. ಕೂಡಲೇ‌ ನೇಮಕ ಮಾಡಲು ಸಿಎಂ‌ ಜೊತೆ‌ ಮಾತನಾಡಿ ತೀರ್ಮಾನ ತೆಗೆದುಕೊಳ್ಳುವೆ ಎಂದು ತಿಳಿಸಿದರು. ಬಿಜೆಪಿ ಸರ್ಕಾರ‌ ಬಂದ‌ ಮೇಲೆ ನೆರೆ ಮತ್ತು ಕೋವಿಡ್ ಸಮಸ್ಯೆ ಉದ್ಭವವಾಗಿದ್ದು. ಆದ್ರೂ ಮುಖ್ಯಮಂತ್ರಿಗಳು ಎದೆಗುಂದದೆ ಕೆಲಸ‌ ಮಾಡುತ್ತಿದ್ದಾರೆ ಎಂದರು.

ABOUT THE AUTHOR

...view details