ಕರ್ನಾಟಕ

karnataka

ETV Bharat / state

'ಕುಣಿಯಲಾಗ್ದೆ ನೆಲ ಡೊಂಕು' ಅನ್ನುತ್ತಿದ್ದಾರೆ... ಸಿದ್ದರಾಮಯ್ಯಗೆ ಸಚಿವ ನಾಗೇಶ್​​​ ಟಾಂಗ್​​ - Excise Minister Nagesh Statement Against Siddaramhia

ಕುಣಿಯಲಾರದವರಿಗೆ ನೆಲ ಡೊಂಕು ಎನ್ನುವ ರೀತಿ ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್, ಸಿದ್ದರಾಮಯ್ಯಗೆ ಟಾಂಗ್​ ನೀಡಿದ್ದಾರೆ.

ಅಬಕಾರಿ ಸಚಿವ ಎಚ್.ನಾಗೇಶ್

By

Published : Oct 23, 2019, 8:52 PM IST

ಕೋಲಾರ: ಕುಣಿಯಲಾರದವರಿಗೆ ನೆಲ ಡೊಂಕು ಎನ್ನುವ ರೀತಿ ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್, ಸಿದ್ದರಾಮಯ್ಯಗೆ ಟಾಂಗ್​ ನೀಡಿದ್ದಾರೆ.

ಕೋಲಾರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ವಿಶ್ವ ಪ್ರಸಿದ್ಧಿಯಾಗಿದ್ದಾರೆ. ಹೀಗಾಗಿ ದೇಶಾದ್ಯಂತ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಆದರಿಂದ ಬಿಜೆಪಿ ಇವಿಎಂ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವುದು ಸರಿಯಲ್ಲ ಎಂದರು. ಪ್ರಧಾನಿ ಮೋದಿಯವರಿಗೆ ಯಾವುದೇ ವೈಯುಕ್ತಿಕ ಆಸೆಗಳಿಲ್ಲ. ಅವರು ಸೋಲಿಲ್ಲದ ಸರದಾರರಾಗಿದ್ದು, ದೇಶದ ಕ್ಷೇಮಾಭಿವೃದ್ಧಿ ಬಗ್ಗೆ ಗಮನ ಹರಿಸುವಂತವರು ಎಂದರು.

ಅಬಕಾರಿ ಸಚಿವ ಹೆಚ್.ನಾಗೇಶ್

ಡಿಕೆಶಿಗೆ ಜಾಮೀನು ಬಗ್ಗೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್ ಕಷ್ಟದಲ್ಲಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಸಂಕಷ್ಟದಲ್ಲಿರುವವರ ಕುರಿತು ಕಾಮೆಂಟ್ ಮಾಡುವುದು ಸರಿಯಲ್ಲ ಎಂದರು.

For All Latest Updates

TAGGED:

ABOUT THE AUTHOR

...view details