ಕೋಲಾರ :ಆನ್‌ಲೈನ್ ಮದ್ಯ ಮಾರಾಟ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಕೋಲಾರದಲ್ಲಿ ಅಬಕಾರಿ ಸಚಿವ ಹೆಚ್ ನಾಗೇಶ್ ಹೇಳಿದ್ರು.
ಆನ್‌ಲೈನ್ ಮದ್ಯ ಮಾರಾಟದ ಕುರಿತಂತೆ ಅಬಕಾರಿಂದ ಸ್ಪಷ್ಟನೆ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ರಾಜ್ಯಗಳ ಆನ್‌ಲೈನ್ ಮದ್ಯ ಮಾರಾಟದ ಕುರಿತು ಮಾಹಿತಿ ಪಡೆಯಬೇಕಾಗಿದೆ. ಹಾಗಾಗಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಮುಖ್ಯಮಂತ್ರಿಗಳ ಮುಂದೆ ಇಡಲಾಗುವುದು ಎಂದ್ರು. ಈಗಾಗಲೇ ಬಾರ್ ಮಾಲೀಕರು ಆನ್‌ಲೈನ್ ಮಾರಾಟಕ್ಕೆ ಅವಕಾಶ ನೀಡದಂತೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಆನ್‌ಲೈನ್ ಮದ್ಯ ಮಾರಾಟದಿಂದ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳಬಹುದಾ, ಸ್ಥಳೀಯವಾಗಿ ವಿರೋಧಗಳು ಎದುರಾಗಲಿವೆಯಾ, ಬುದ್ಧಿ ಜೀವಿಗಳಿಂದ ವಿರೋಧ ವ್ಯಕ್ತವಾಗುತ್ತಾ, ಅಪ್ರಾಪ್ತರಿಗೆ ತೊಂದರೆಯಾಗಲಿದ್ಯಾ.. ಹೀಗೆ ಈ ಎಲ್ಲಾ ರೀತಿಯಿಂದಲೂ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡಲಾಗುವುದು ಎಂದರು.
ಈ ಕುರಿತು ಮಾಹಿತಿ ಕಲೆ ಹಾಕಲು ಈಗಾಗಲೇ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಅಧಿಕಾರಿಗಳ ವರದಿ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಸದ್ಯಕ್ಕೆ ಆನ್‌ಲೈನ್ ಮದ್ಯ ಮಾರಾಟವಿಲ್ಲ ಎಂದು ಸ್ಪಷ್ಟಪಡಿಸಿದ್ರು.