ಕೋಲಾರ: ಸಿಎಂ ಯಡಿಯೂರಪ್ಪನವರಿಗೆ ಹೆಚ್.ವಿಶ್ವನಾಥ್ಗೆ ಪರಿಷತ್ ಟಿಕೆಟ್ ನೀಡಲು ಒಲವಿತ್ತು. ಆದರೆ ಹೈಕಮಾಂಡ್ ವಿಶ್ವನಾಥ್ ಹೆಸರನ್ನು ಕೈ ಬಿಟ್ಟಿರುವುದು ಬೇಸರ ತಂದಿದೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ಹೇಳಿದ್ದಾರೆ.
ವಿಶ್ವನಾಥ್ಗೆ ಪರಿಷತ್ ಟಿಕೆಟ್ ನೀಡಲು ಬಿಎಸ್ವೈಗೆ ಒಲವಿತ್ತು: ಸಚಿವ ಹೆಚ್.ನಾಗೇಶ್ - Minister H. Nagesh talks about H.vishwanath
ಮಾಜಿ ಶಾಸಕ ಹೆಚ್.ವಿಶ್ವನಾಥ್ಗೆ ಪರಿಷತ್ ಟಿಕೆಟ್ ಕೈ ತಪ್ಪಿದಕ್ಕೆ ಅಬಕಾರಿ ಸಚಿವ ಹೆಚ್.ನಾಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಸಂಬಂಧ ಅಧಿಕಾರಿಗಳ ಸಭೆ ಬಳಿಕ ಮಾತನಡಿದ ಅವರು, ಕೆಲ ಸಮಯದಲ್ಲಿ ರಾಜಕೀಯದಲ್ಲಿ ಏರುಪೇರುಗಳು ಆಗುತ್ತವೆ. ಅದು ಒಬ್ಬರ ನಿರ್ಧಾರ ಅಲ್ಲ. ಕಾರಣಾಂತರಗಳಿಂದ ವಿಶ್ವನಾಥ್ ಹೆಸರನ್ನ ಕೈ ಬಿಡಲಾಗಿದೆ.
ಅವರು ಒಂದು ಪಕ್ಷದ ಅಧ್ಯಕ್ಷರಾಗಿದ್ದವರು. ಅವರ ಆಗಮನದಿಂದ ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ಆದರೆ ಸ್ವಲ್ಪ ತಾಳ್ಮೆಯಿಂದ ಇದ್ದರೆ ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ಭವಿಷ್ಯ ಇದೆ. ಪಕ್ಷಕ್ಕೆ ದುಡಿದವರನ್ನು ಬಿಟ್ಟು ಮೂಲ ಬಿಜೆಪಿಗರಿಗೆ ಇಬ್ಬರಿಗೆ ಟಿಕೆಟ್ ನೀಡುವ ಮೂಲಕ ಕಾಂಪ್ರಮೈಸಿಂಗ್ ಫಾರ್ಮುಲಾ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವರ ಬಳಿ ಮಾತನಾಡಿ ಮನವೊಲಿಸಲು ಪ್ರಯತ್ನಿಸುವೆ ಎಂದರು.