ಕೋಲಾರ: ಉಪ ಚುನಾವಣೆಯಲ್ಲಿ ಎರಡು ಮೂರು ಸ್ಥಾನ ಹೆಚ್ಚು-ಕಡಿಮೆಯಾದ್ರೂ 15ರಲ್ಲಿ 12ಸ್ಥಾನ ಗೆಲ್ಲುತ್ತೇವೆ ಎಂದು ಮುಳಬಾಗಿಲು ಪಟ್ಟಣದಲ್ಲಿ ಅಬಕಾರಿ ಸಚಿವ ಹೆಚ್ ನಾಗೇಶ ಹೇಳಿದ್ದಾರೆ.
15ರಲ್ಲಿ 12 ಸ್ಥಾನ ಬಿಜೆಪಿ ಗೆಲ್ಲುತ್ತೆ.. ಸಚಿವ ಹೆಚ್.ನಾಗೇಶ ವಿಶ್ವಾಸ - 12 ಸ್ಥಾನ ಗೆಲ್ಲುತ್ತೇವೆ ಸಚಿವ ಎಚ್.ನಾಗೇಶ ವಿಶ್ವಾಸ
ಉಪ ಚುನಾವಣೆಯಲ್ಲಿ ಎರಡು ಮೂರು ಸ್ಥಾನ ಹೆಚ್ಚು-ಕಡಿಮೆಯಾದ್ರೂ 15ರಲ್ಲಿ 12 ಸ್ಥಾನವನ್ನ ನಾವು ಗೆಲ್ಲುತ್ತೇವೆ ಎಂದು ಅಬಕಾರಿ ಸಚಿವ ಹೆಚ್ ನಾಗೇಶ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ನೇತಾಜಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 14ವರ್ಷ ವಯೋಮಿತಿಯ ರಾಜ್ಯಮಟ್ಟದ ಖೋ-ಖೋ ಪಂದ್ಯಾವಳಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಅವರು,ಹೈವೋಲ್ಟೇಜ್ ಕದನಕ್ಕೆ ಹೊಸಕೋಟೆ ಸಜ್ಜಾಗಿದೆ. ಮುಖ್ಯಮಂತ್ರಿಗಳ ಸೂಚನೆಯಂತೆ ಹೊಸಕೋಟೆಯಲ್ಲಿ ಪ್ರಚಾರ ಮಾಡುತ್ತೇನೆ. ಜಾಸ್ತಿ ಪ್ರಯತ್ನ ಪಟ್ಟರೆ ಮಾತ್ರ ಬಿಜೆಪಿ ಹೊಸಕೋಟೆ ಗೆಲ್ಲಬಹುದು. ಬಿಜೆಪಿ ಸಂಸದ ಬಚ್ಚೇಗೌಡರು ಪ್ರಚಾರದಲ್ಲಿ ಸಕ್ರಿಯ ಆಗಬೇಕು ಎಂದು ಸಲಹೆ ನೀಡಿದ್ರು. ಅವಧಿ ಪೂರ್ವದಲ್ಲಿ ರಾಜ್ಯ ಸರ್ಕಾರ ಬಿದ್ದರೆ ನಾನು ಹೊಣೆ ಹೊರುತ್ತೇನೆ. ಅವಧಿ ಪೂರ್ಣವಾಗದೆ ಚುನಾವಣೆ ಎದುರಿಸಲು ಯಾರೂ ಸಿದ್ದವಿಲ್ಲ. ಹಾಗಾಗಿ ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರ ಉಳಿಸುವ ಮಾತಾಡಿದ್ದಾರೆ. ಹೊಸಕೋಟೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಸಿಎಂ ಸೂಚನೆ ಮೇರೆಗೆ ಠಿಕಾಣಿ ಹೂಡುವೆ ಎಂದರು.
ಉಪಚುನಾವಣೆಯಲ್ಲಿ ಗೆದ್ದು ಬರುವ ಎಲ್ಲರಿಗೂ ಸಚಿವ ಸ್ಥಾನ ಗ್ಯಾರಂಟಿ. ಸಿಎಂ ಬಳಿ ಇರುವ ಖಾತೆಗಳನ್ನ ಗೆದ್ದು ಬರುವ ಎಲ್ಲರಿಗೂ ನೀಡಲಾಗುವುದು. ಉಳಿದಂತೆ ಈಗಾಗಲೇ ಹಂಚಿಕೆಯಾಗಿರುವ ಖಾತೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದರು.