ಕೋಲಾರ :ನೂತನವಾಗಿ ಪ್ರಾರಂಭಿಸಿರುವ ಕೊರೊನಾ ಪ್ರಯೋಗಾಲಯವನ್ನ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ನಾಗೇಶ್ ಉದ್ಘಾಟಿಸಿದರು.
ಕೋಲಾರದಲ್ಲಿ ಕೊರೊನಾ ಟೆಸ್ಟಿಂಗ್ ಲ್ಯಾಬ್ ಉದ್ಘಾಟಿಸಿದ ಸಚಿವ ಹೆಚ್ ನಾಗೇಶ್..
ಇದರಿಂದ ಕೋಲಾರ ಜಿಲ್ಲೆಯಾದ್ಯಂತ ಸಾಕಷ್ಟು ಜನರ ವರದಿ ಬರುವುದು ವಿಳಂಬವಾಗ್ತಾಯಿತ್ತು. ಜೊತೆಗೆ ಜಿಲ್ಲಾಡಳಿತಕ್ಕೂ ಸಹ ತಡವಾದ ವರದಿಗಳಿಂದ ತಲೆನೋವಾಗಿ ಪರಿಣಮಿಸಿತ್ತು. ನೂತನ ಪ್ರಯೋಗಾಲಯ 1 ದಿನಕ್ಕೆ 150 ಮಂದಿಗೆ ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿದೆ.
ನಗರದ ಎಸ್ ಎನ್ ಆರ್ ಜಿಲ್ಲಾಸ್ಪತ್ರೆಯ ಸುಸಜ್ಜಿತ ಕಟ್ಟಡದಲ್ಲಿ ಇಂದಿನಿಂದ ಪ್ರಯೋಗಾಲಯ ಆರಂಭವಾಗಿದೆ. ಇಷ್ಟುದಿನ ಕೊರೊನಾ ಸೋಂಕು ದೃಢಪಡಿಸುವ ಹಿನ್ನೆಲೆಯಲ್ಲಿ ವ್ಯಕ್ತಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿಗಳನ್ನ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿತ್ತು.
ಇದರಿಂದ ಕೋಲಾರ ಜಿಲ್ಲೆಯಾದ್ಯಂತ ಸಾಕಷ್ಟು ಜನರ ವರದಿ ಬರುವುದು ವಿಳಂಬವಾಗ್ತಾಯಿತ್ತು. ಜೊತೆಗೆ ಜಿಲ್ಲಾಡಳಿತಕ್ಕೂ ಸಹ ತಡವಾದ ವರದಿಗಳಿಂದ ತಲೆನೋವಾಗಿ ಪರಿಣಮಿಸಿತ್ತು. ನೂತನ ಪ್ರಯೋಗಾಲಯ 1 ದಿನಕ್ಕೆ 150 ಮಂದಿಗೆ ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿದೆ. ಇದೇ ವೇಳೆ ಜಿಲ್ಲಾಧಿಕಾರಿ ಸತ್ಯಭಾಮ, ಡಿಹೆಚ್ಒ ವಿಜಯ್‌ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ನಾರಾಯಣಸ್ವಾಮಿ ಸೇರಿ ವೈದ್ಯರು ಹಾಜರಿದ್ದರು.