ಕೋಲಾರ:ಜಿಲ್ಲಾ ಉಸ್ತುವಾರಿ ನೀಡುವ ಬಗ್ಗೆ ಸಿಎಂ ಇನ್ನೂ ತೀರ್ಮಾನ ಮಾಡಿಲ್ಲ, ಕೋಲಾರ ಆಗಲಿ, ರಾಮನಗರ ಅಗಲಿ, ಯಾವುದೇ ಜಿಲ್ಲೆ ಕೊಟ್ಟರೂ ಸ್ವೀಕರಿಸುವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದರು.
ಸಚಿವ ಸಿ.ಪಿ ಯೋಗೇಶ್ವರ್ ಪ್ರತಿಕ್ರಿಯೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋಲಾರ ಹಾಗೂ ರಾಮನಗರ ಎರಡು ನಮ್ಮ ರಾಜ್ಯದಲ್ಲಿರುವಂತಹ ಜಿಲ್ಲೆಗಳೇ. ಹೀಗಾಗಿ ಯಾವುದೇ ಜಿಲ್ಲೆಯ ಉಸ್ತುವಾರಿ ವಹಿಸಿದರು ಕಾರ್ಯನಿರ್ವಹಿಸುವೆ. ಕೋಲಾರ ಜಿಲ್ಲೆಯ ಜವಾಬ್ದಾರಿ ವಹಿಸಿದರೆ ಇನ್ನೂ ಖುಷಿಯಾಗುತ್ತದೆ ಎಂದರು.
ನಿನ್ನೆ ಸಂಜೆ ಮುಖ್ಯಮಂತ್ರಿಗಳು ನನ್ನನ್ನ ಕರೆಸಿ, ಅಡಳಿತಾತ್ಮಕವಾಗಿ ಸರಿದೂಗಿಸುವ ದೃಷ್ಟಿಯಿಂದ ಖಾತೆಯನ್ನ ಬದಲಾವಣೆ ಮಾಡುವುದಾಗಿ ಹೇಳಿದರು. ನಾನು ಮಾಡಬಹುದು ಎಂದು ಹೇಳಿದ್ದು, ಸಿಎಂ ಅವರ ತೀರ್ಮಾನಕ್ಕೆ ಸಂಪುಟದ ಸಹೋದ್ಯೋಗಿಗಳಾಗಿ ಬದ್ಧನಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಜೊತೆಗೆ ಕೋವಿಡ್ ನಿಂದ ಇತ್ತೀಚೆಗೆ ಹೊರಬರುತ್ತಿದ್ದೇವೆ, ಮುಖ್ಯಮಂತ್ರಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ. ಮುಖ್ಯಂತ್ರಿಗಳು ನನಗೆ ಕೊಟ್ಟಿರುವ ಖಾತೆ ಬಹಳ ತೃಪ್ತಿ ತಂದಿದೆ ಎಂದು ಯೋಗೇಶ್ವರ್ ಹೇಳಿದ್ರು.