ಕೋಲಾರ:ಜಿಲ್ಲೆಯ ಮಾಲೂರು ಟೇಕಲ್ ಭಾಗದಲ್ಲಿ ಸಚಿವ ಸಿಸಿ ಪಾಟೀಲ್ ಕ್ರಷರ್ಗಳ ವೀಕ್ಷಣೆಗೆ ಭೇಟಿ ನೀಡಿದ್ದ ವೇಳೆ ಶಾಸಕ ನಂಜೇಗೌಡ ಹಾಗೂ ಸಂಸದ ಮುನಿಸ್ವಾಮಿ ನಡುವೆ ಮಾತಿನ ಚಕಮಕಿ ನಡೆಯಿತು.
ಸಚಿವರ ಮುಂದೆಯೇ ಶಾಸಕ - ಸಂಸದರ ಮಾತಿನ ಜಟಾಪಟಿ - ಸಂಸದ ಮುನಿಸ್ವಾಮಿ
ಕೋಲಾರದ ಮಾಲೂರು ಟೇಕಲ್ ಭಾಗದಲ್ಲಿ ಕ್ರಷರ್ಗಳ ವೀಕ್ಷಣೆಗೆ ಸಚಿವ ಸಿಸಿ ಪಾಟೀಲ್ ಆಗಮಿಸಿದ್ದರು. ಈ ವೇಳೆ, ಕ್ರಷರ್ಗಳ ವಿಚಾರವಾಗಿ ಶಾಸಕ ನಂಜೇಗೌಡ ಹಾಗೂ ಸಂಸದ ಮುನಿಸ್ವಾಮಿ ನಡುವೆ ಮಾತಿನ ಚಕಮಕಿ ನಡೆಯಿತು.
ಮಾಲೂರು ಟೇಕಲ್ ಭಾಗದಲ್ಲಿ ಕ್ರಷರ್ಗಳ ವೀಕ್ಷಣೆಗೆ ಸಚಿವ ಸಿಸಿ ಪಾಟೀಲ್ ಆಗಮಿಸಿದ್ದರು. ಮಾಲೂರಿನ ಕೊಮ್ಮನಹಳ್ಳಿ ಗ್ರಾಮದ ಬಳಿಯಿರುವ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮಾಲೀಕತ್ವದ ಕ್ರಷರ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸರ್ಕಾರಿ ಗುಂಡುತೋಪಿನಲ್ಲಿ ಕ್ರಷರ್ ಮಾಡಿದ್ದಾರೆ ಎಂಬ ಮುನಿಸ್ವಾಮಿ ಅವರ ಹೇಳಿಕೆ ಇಬ್ಬರ ನಡುವಿನ ಮಾತಿನ ಜಟಾಪಟಿಗೆ ಕಾರಣವಾಯಿತು.
ಸಚಿವರ ಮುಂದೆಯೇ ಮುನಿಸ್ವಾಮಿ ಅವರ ಹೇಳಿಕೆ ಖಂಡಿಸಿದ ಶಾಸಕರು, ಇದೆಲ್ಲಾ ಬಿಡಪ್ಪ ಪರ್ಸನಲ್ ಆಗಿ ತಗೋಬೇಡ ಎಂದರು. ಈ ವೇಳೆ, ಸಂಸದರು ನೀವು ಇದೆಲ್ಲಾ ಬಿಡಿ ನನಗೂ ಎಲ್ಲಾ ಗೊತ್ತಿದೆ ಎಂದರು. ಬಳಿಕ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಸಚಿವರೂ ಸೇರಿದಂತೆ ನೆರೆದಿದ್ದವರೆಲ್ಲ ಮೂಕ ಪ್ರೇಕ್ಷಕರಾಗಿದ್ದರು.