ಕೋಲಾರ:ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೋಟಿಸ್ ನೀಡಿರುವುದು ಕೇಂದ್ರ ಸಚಿವ ಸಮಿತಿಗೆ ಸಂಬಂಧಿಸಿದ ವಿಷಯ. ಸಮಿತಿ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಬದ್ಧವಾಗಿರುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದರು.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಪ್ರತಿಕ್ರಿಯೆ ನೀಡಿರುವುದು ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವರಿಗೆ ಮಾತನಾಡುವ ಚಟವಿರುತ್ತದೆ. ಹಾಗಾಗಿ ಈ ರೀತಿ ಮಾತನಾಡುತ್ತಾರೆ. ನೋಟಿಸ್ ನೀಡಿರುವುದು ಕೇಂದ್ರ ಸಚಿವ ಸಂಪುಟ ಸಮಿತಿಗೆ ಬಿಟ್ಟ ವಿಷಯ ಎಂದರು.
ಓದಿ: ಸರ್ಕಾರಕ್ಕೆ ಮುಜುಗರ ತಂದ ಆರೋಪ; ಶಾಸಕ ಯತ್ನಾಳ್ಗೆ ಪಕ್ಷದ ಶೋಕಾಸ್ ನೋಟಿಸ್
ಇನ್ನು ರಾಜ್ಯವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಬೇಕು ಎಂದು ಸಿಎಂ ಯಡಿಯೂರಪ್ಪನವರು ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ತಮ್ಮದೇ ಸರ್ಕಾರ ಬರಬೇಕೆಂದು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಅದರ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ ಹೊರತು, ಯಾರೋ ಸಣ್ಣದಾಗಿ ಮಾತನಾಡುತ್ತಾರೆಂದು ನಾವು ಅವರ ಬಗ್ಗೆ ಮಾತನಾಡುವ ಪ್ರಮೇಯ ಇಲ್ಲ ಎಂದರು.