ಕೋಲಾರ:ಬಿಜೆಪಿ ಸರ್ಕಾರಕ್ಕೆ ಜನ ಅಧಿಕಾರ ಕೊಟ್ಟಿರೋದು ಭ್ರಷ್ಟಾಚಾರ ನಿರ್ಮೂಲನೆ ಮಾಡಲು. ತಪ್ಪು ಮಾಡಿರೋರು ಸಿಕ್ಕಿ ಹಾಕಿಕೊಳ್ಳುತ್ತಾರೆ. ತಪ್ಪು ಮಾಡದವರು ಎಲ್ಲಾ ಸಂಕಷ್ಟದಿಂದ ಆಚೆ ಬರುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ಗೆ ಕೋಲಾರದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಅವರು ಟಾಂಗ್ ಕೊಟ್ಟರು.
ಇಂದು ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಡಿಕೆಶಿಗೆ ಇಡಿ ಸಂಕಷ್ಟದ ಕುರಿತು ಮಾತನಾಡಿದ ಅವರು, ಕಾನೂನು ಪರಿಪಾಲನೆ ಮಾಡುವುದು ಮುಖ್ಯ. ಕಾನೂನು ಪರಿಪಾಲನೆ ಮಾಡುವವರು ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ. ವ್ಯವಸ್ಥೆಯಲ್ಲಿ ಕರ್ತವ್ಯ ಪರಿಪಾಲನೆ ಮಾಡುವುದು ಬಹಳ ಮುಖ್ಯ ಎಂದರು.
ವರಿಷ್ಠರು ತೀರ್ಮಾನ ಮಾಡುತ್ತಾರೆ: ಇನ್ನು, ಡಿಕೆಶಿ ಸಿಎಂ ಆಗುವ ಕನಸು ಹೊಂದಿದ್ದಾರೆ. ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಅವಕಾಶ ಕೊಡುತ್ತಾರೆ ಎಂದು ಹೇಳಿದ್ರು. ಇನ್ನು, ಈಶ್ವರಪ್ಪ ಅವರು ಸಚಿವ ಸಂಪುಟಕ್ಕೆ ಸೇರುವುದರ ಕುರಿತು ಸಿಎಂ ಹಾಗೂ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.