ಕರ್ನಾಟಕ

karnataka

ETV Bharat / state

ರಸ್ತೆ ಸುರಕ್ಷತೆ ಕುರಿತು ಸಭೆ, ದುರಸ್ತಿಗೆ ಸೂಚನೆ - ಜಿಲ್ಲಾಧಿಕಾರಿ

ಸಭೆಯಲ್ಲಿ ಪ್ರಮುಖವಾಗಿ ರಸ್ತೆ ಸುರಕ್ಷತೆ ಬಗ್ಗೆ ನಗರ ಹಾಗೂ ಪಟ್ಟಣ ಪ್ರದೇಶದಲ್ಲಿರುವ ಅಪಘಾತ ಸ್ಥಳಗಳನ್ನು ಸರಿಪಡಿಸುವಂತೆ ಹಾಗೂ ಹಾಳಾಗಿರುವ ರಸ್ತೆಗಳನ್ನು ಸರಿಪಡಿಸುವಂತೆ ಸೂಚಿಸಲಾಗಿದೆ.

ರಸ್ತೆ ಸುರಕ್ಷತೆ ಕುರಿತು ಸಭೆ

By

Published : May 28, 2019, 8:57 AM IST

ಕೋಲಾರ​:ರಸ್ತೆ ಸುರಕ್ಷತೆ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಪ್ರಮುಖವಾಗಿ ರಸ್ತೆ ಸುರಕ್ಷತೆ ಬಗ್ಗೆ ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಹೆಚ್ಚಾಗಿ ಅಪಘಾತ ಸ್ಥಳಗಳನ್ನು ಸರಿಪಡಿಸುವಂತೆ ಹಾಗೂ ಹಾಳಾಗಿರುವ ರಸ್ತೆಗಳನ್ನು ಸರಿಪಡಿಸುವಂತೆ ಸೂಚನೆ ನೀಡಲಾಯಿತು. ಪುಟ್‌ಪಾತ್​ ತೆರವು, ಬೃಹತ್‌ ವಾಹನಗಳ ಸಂಚಾರದಿಂದ ಟ್ರಾಫಿಕ್​ ಜಾಮ್​ ಸಂಭವಿಸದಂತೆ ಕ್ರಮ ಹಾಗೂ ಹೆಲ್ಮೆಟ್​ ಕಡ್ಡಾಯ ಮಾಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ರಸ್ತೆ ಸುರಕ್ಷತೆ ಕುರಿತು ಸಭೆ

ಕೋಲಾರ ಜಿಲ್ಲಾಧಿಕಾರಿ ಜೆ.ಮಂಜುನಾಥ್​, ಎಸ್ಪಿ ರೋಹಿಣಿ ಕಠೋಚ್​ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸಾರಿಗೆ ಇಲಾಖೆ, ನಗರಸಭೆ, ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ABOUT THE AUTHOR

...view details