ಕೋಲಾರ : ಕರ್ನಾಟಕದಲ್ಲಿ ಮಾರ್ಗದರ್ಶಿ ಚಿಟ್ಸ್ನ 22ನೇ ಶಾಖೆ ಉದ್ಘಾಟನೆಗೊಂಡಿದೆ. ಸಂಸ್ಥೆಯ ಒಟ್ಟಾರೆ 109 ನೇ ಶಾಖೆ ಇದಾಗಿದೆ. ಕಂಪನಿ ಎಂಡಿ ಶೈಲಜಾ ಕಿರಣ್ ಅವರು ಈ ಶಾಖೆಯನ್ನು ವರ್ಚುಯಲ್ ಆಗಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಚಂದಾದಾರರು ಭಾಗವಹಿಸಿದ್ದರು.
ನೂತನ ಶಾಖೆ ಉದ್ಘಾಟನೆ ಬಳಿಕ ಮಾತನಾಡಿದ ಮಾರ್ಗದರ್ಶಿ ಚಿಟ್ಸ್ ನಿರ್ದೇಶಕರಾದ ಪಿ ಲಕ್ಷ್ಮಣ್ರಾವ್, ಕೋಲಾರ ಜನತೆಯ ಸಹಕಾರ ಅಮೂಲ್ಯವಾದದ್ದು ಎಂದು ಹೇಳಿದರು. ಜನತೆ ಮಾರ್ಗದರ್ಶಿ ಚಿಟ್ಸ್ ಕಂಪನಿಯಿಂದ ಸೌಲಭ್ಯಗಳನ್ನು ಪಡೆಯಬಹುದು. ಇಂದಿನವರೆಗೆ ಕೋಲಾರ ಶಾಖೆಯಲ್ಲಿ 19 ಕೋಟಿ ವಹಿವಾಟು ನಡೆಸಲಾಗಿದ್ದು, ಮಾಸಾಂತ್ಯಕ್ಕೆ 26 ಕೋಟಿ ರೂಗಳ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಕೋಲಾರ ಜಿಲ್ಲೆಯ ಸಾರ್ವಜನಿಕರ ಅಗತ್ಯತೆಗಳಿಗೆ ಅನುಸಾರವಾಗಿ ಸಂಸ್ಥೆಯು ತನ್ನ ಚೀಟಿ ಸೇವೆಗಳನ್ನು ನೀಡಲು ಸದಾ ಬದ್ಧವಾಗಿದೆ ಎಂದರು. ಕೋಲಾರ ಶಾಖೆಯಲ್ಲಿ 1 ಲಕ್ಷದಿಂದ 30 ಲಕ್ಷ ಮೊತ್ತದ ವರೆಗಿನ ಚೀಟಿ ಗುಂಪುಗಳನ್ನು ಪ್ರಾರಂಭಿಸಲಾಗಿದೆ. ಚೀಟಿ ಗುಂಪುಗಳು ಕ್ರಮವಾಗಿ 25, 30, 40 ಮತ್ತು 50 ತಿಂಗಳುಗಳ ಅವಧಿಯದ್ದಾಗಿವೆ.
ಚಂದಾದಾರರು ತಿಂಗಳಿಗೆ 2 ಸಾವಿರದಿಂದ 1 ಲಕ್ಷ ರೂವರೆಗೂ ಪಾವತಿ ಮಾಡಬಹುದಾಗಿದೆ. ಶೀಘ್ರದಲ್ಲೇ ನೂತನ ಚೀಟಿ ಗುಂಪುಗಳನ್ನು ಪ್ರಾರಂಭಿಸುವುದಾಗಿ ಅವರು ಹೇಳಿದರು. ಮುಂಬರುವ ಅಕ್ಟೋಬರ್ ತಿಂಗಳಲ್ಲಿ ಹಾವೇರಿಯಲ್ಲಿ ನೂತನ ಶಾಖೆ ಪ್ರಾರಂಭಿಸುವುದಾಗಿ ಹೇಳಿದರು. ಶೀಘ್ರದಲ್ಲೇ ಬೆಂಗಳೂರಿನಲ್ಲಿ ಮತ್ತೆರಡು ನೂತನ ಶಾಖೆಗಳನ್ನು ತೆರೆಯಲು ಯೋಚಿಸಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಮುಂಬರುವ ದಿನಗಳಲ್ಲಿ ಸೇವೆಯ ವಿಸ್ತರಣೆಗೆ ಮುಂದಾಗುವುದಾಗಿ ಅವರು ತಿಳಿಸಿದ್ದಾರೆ.