ಮಂಗಳೂರು/ಕೋಲಾರ:ದ.ಕ ಜಿಲ್ಲೆಯಲ್ಲಿ ಪ್ರೊಬೇಷನರಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಾಮಿಲಿ ಕೋಲಾರ ಜಿಲ್ಲೆಯ ಆಸ್ಪತ್ರೆಯಲ್ಲಿ ಕೋವಿಡ್ಗೆ ಬಲಿಯಾಗಿದ್ದಾರೆ.
ಗರ್ಭಿಣಿ ಯುವ ಸಬ್ ಇನ್ಸ್ಪೆಕ್ಟರ್ ಮಾರಕ ಕೋವಿಡ್ಗೆ ಬಲಿ... ಕಂಬನಿ ಮಿಡಿದ ಇಲಾಖೆ! - ಕೋಲಾರದಲ್ಲಿ ಪ್ರೊಬೆಷನರಿ ಪೊಲೀಸ್ ಇನ್ಸ್ಪೆಕ್ಟರ್ ಕೋವಿಡ್ಗೆ ಬಲಿ,
ದ.ಕ ಜಿಲ್ಲೆಯ ಪ್ರೊಬೇಷನರಿ ಪೊಲೀಸ್ ಇನ್ಸ್ಪೆಕ್ಟರ್ ಕೋಲಾರದಲ್ಲಿ ಕೋವಿಡ್ಗೆ ಬಲಿಯಾಗಿದ್ದಾರೆ.

ದ.ಕ.ಜಿಲ್ಲೆಯ ಪ್ರೊಬೆಷನರಿ ಪೊಲೀಸ್ ಇನ್ಸ್ಪೆಕ್ಟರ್ ಕೋವಿಡ್ಗೆ ಬಲಿ
2021 ಜನವರಿ 11ರಿಂದ ಪ್ರೊಬೇಷನರಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ದ.ಕ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಾಮಿಲಿ(24) ಮೂಲತಃ ಕೋಲಾರ ಜಿಲ್ಲೆಯವರು. ಏಳು ತಿಂಗಳ ಗರ್ಭಿಣಿಯಾಗಿರುವ ಹಿನ್ನೆಲೆ ಇವರು ಲಸಿಕೆ ಪಡೆದುಕೊಂಡಿರಲಿಲ್ಲ.
ಕೋವಿಡ್ ಸೋಂಕು ತಗುಲಿದ್ದ ಇವರು ಮೇ 2ರಂದು ಕೋಲಾರ ಜಿಲ್ಲೆಯ ಆರ್.ಎಂ.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ಇಂದು ಮುಂಜಾನೆ 4.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Last Updated : May 18, 2021, 8:01 PM IST