ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರ ಮೂಲದ ವ್ಯಕ್ತಿ ಕೋಲಾರದಲ್ಲಿ ಸಾವು: ಆತಂಕದಲ್ಲಿ ಸ್ಥಳೀಯರು - kolar news

ಕೋಲಾರ ಜಿಲ್ಲೆಯ ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಮಹಾರಾಷ್ಟ್ರ ಮೂಲದ ಮನೋಹರ್ (60) ಎಂಬುವರು ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಮೃತಪಟ್ಟಿರಬಹುದೆಂದು ಶಂಕೆ ವ್ಯಕ್ತವಾಗಿದೆ.

man death for heart attack in kolar
ಮಹಾರಾಷ್ಟ್ರ ಮೂಲದ ವ್ಯಕ್ತಿ ಕೋಲಾರದಲ್ಲಿ ಸಾವು

By

Published : May 19, 2020, 1:07 PM IST

ಕೋಲಾರ: ಜಿಲ್ಲೆಯಲ್ಲಿ‌ ಮಹಾರಾಷ್ಟ್ರ ಮೂಲದ ವ್ಯಕ್ತಿ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಜಿಲ್ಲೆಯ ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಮಹಾರಾಷ್ಟ್ರ ಮೂಲದ ಮನೋಹರ್ (60) ಎಂಬುವರು ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಮೃತಪಟ್ಟಿರಬಹುದೆಂದು ಶಂಕೆ ವ್ಯಕ್ತವಾಗಿದೆ. ಮಹಾರಾಷ್ಟ್ರದಿಂದ 15 ದಿನಗಳ ಹಿಂದೆ ಕೋಲಾರ ಜಿಲ್ಲೆಗೆ ಆಗಮಿಸಿದ್ದ ವ್ಯಕ್ತಿ, ಚಿಕ್ಕಬಳ್ಳಾಪುರ ಮೂಲದ ಟ್ರಕ್ ಚಾಲಕನೊಂದಿಗೆ ಆಗಮಿಸಿ‌ ತಡರಾತ್ರಿ ಹೃದಯಾಘಾತದಿಂದ ‌ಮೃತಪಟ್ಟಿದ್ದಾನೆ.

ಮಹಾರಾಷ್ಟ್ರದಿಂದ ತರಕಾರಿ ಸಾಗಾಣಿಕೆ ಟ್ರಕ್​ನಲ್ಲಿ ಬಂದಿದ್ದ ವ್ಯಕ್ತಿ, ಬೆಂಗಳೂರು ಮೂಲಕ ಮಾಲೂರಿಗೆ ಆಗಮಿಸಿದ್ದಾನೆ. ನಾಲ್ಕು ದಿನಗಳ ಹಿಂದೆ ಮಾಲೂರಿನಿಂದ ಒರಿಸ್ಸಾಗೆ ಹೋಗಿದ್ದ‌ ಈ ವ್ಯಕ್ತಿ, ವಾಪಸ್ ಮುಳಬಾಗಿಲು, ಕೋಲಾರ ಮೂಲಕ ನಿನ್ನೆ ಸಂಜೆ ಮಾಲೂರಿಗೆ ಮತ್ತೆ ವಾಪಸಾಗಿದ್ದಾನೆ ಎನ್ನಲಾಗಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ ನಿನ್ನೆ ರಾತ್ರಿ 11 ಗಂಟೆಗೆ ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಆಸ್ಪತ್ರೆಯ ಸುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಜೊತೆಗೆ ಮೃತ ವ್ಯಕ್ತಿಯ ಗಂಟಲು‌ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ABOUT THE AUTHOR

...view details