ಕರ್ನಾಟಕ

karnataka

ETV Bharat / state

ಯುವಕನಿಗೆ ಮಾಲೀಕನಿಂದ ಬೈಗುಳ: ಮನನೊಂದು ಆತ್ಮಹತ್ಯೆಗೆ ಶರಣು - young man committed suicide in kolara

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ ಗ್ರಾಮದ ತೋಟಗಾರಿಕಾ ಇಲಾಖೆಯ ನರ್ಸರಿಯಲ್ಲಿ ಮಾವಿನ ಮರಕ್ಕೆ ನೇಣುಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

man-committed-suicide-in-kolara
ಆತ್ಮಹತ್ಯೆ

By

Published : Apr 9, 2021, 10:59 PM IST

ಕೋಲಾರ: ಫೈನಾನ್ಸ್ ಹಣವನ್ನ ಬಳಕೆ ಮಾಡಿಕೊಂಡಿದ್ದ ಯುವಕನನ್ನ ಮಾಲೀಕ ಬೈದಿದ್ದರಿಂದ ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಾಲೂಕಿನ ಹೊಗಳಗೆರೆಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕ

ಜಿಲ್ಲೆಯ ಚಿಂತಾಮಣಿ ಮೂಲದ ಸಾಧಿಕ್ ಪಾಷಾ (23) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಯುವಕ ಶ್ರೀನಿವಾಸಪುರದ ಭರತ್ ಪೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದು, ಸಾಲ ಮರುಪಾವತಿಸಿದ್ದ ಹಣದಲ್ಲಿ ಒಂದು ಲಕ್ಷ ಹಣವನ್ನ ಬಳಕೆ ಮಾಡಿಕೊಂಡಿದ್ದರಿಂದ ಮಾಲೀಕ ಬೈದಿದ್ದಾನೆ. ಇದರಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶ್ರೀನಿವಾಸಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಓದಿ:ಲಾಡ್ಜ್​​ನಲ್ಲಿ ವಿಷ ಸೇವಿಸಿ ತಾಯಿ ಆತ್ಮಹತ್ಯೆ.. ಮಗ ಆಸ್ಪತ್ರೆ ಪಾಲು: ಕಾರಣ ಮಾತ್ರ ನಿಗೂಢ!

ABOUT THE AUTHOR

...view details