ಕೋಲಾರ: ಲಾರಿ ತಡೆದು ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ಕಾಮಸಮುದ್ರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಜೂನ್ 18ರಂದು ಬಂಗಾರಪೇಟೆಯಿಂದ ತಮಿಳುನಾಡಿಗೆ ಹೋಗುತ್ತಿದ್ದ ಲಾರಿ ತಡೆದು ಚಾಲಕ ರಾಮಕೃಷ್ಣ ಎಂಬುವನ ಮೇಲೆ ಹಲ್ಲೆ ಮಾಡಿ 4.34 ಲಕ್ಷ ರೂಪಾಯಿ ನಗದು ದರೋಡೆ ಮಾಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ, ತಮಿಳುನಾಡು ಮೂಲದ ನಾಗೇಶ್ (25), ಸೈಯ್ಯದ್ ಪಾಷಾ (27), ಜಬೀಉಲ್ಲಾ (25) ಸದ್ದಾಂಹಸೇನ್(23), ಚಿನ್ನಸ್ವಾಮಿ(29) ಎಂಬವರನ್ನು ಬಂಧಿಸಿದ್ದಾರೆ.
ಕೋಲಾರ: ಲಾರಿ ದರೋಡೆ ಮಾಡಿ ಹಣ ದೋಚಿದ್ದ ಐವರು ಆರೋಪಿಗಳ ಬಂಧನ - Lorry robbery accused arrested
ಜೂನ್ 18ರಂದು ತಮಿಳುನಾಡಿಗೆ ಹೋಗುತ್ತಿದ್ದ ಲಾರಿ ತಡೆದು ಚಾಲಕನಿಗೆ ಹಲ್ಲೆ ಮಾಡಿ ಹಣ ದೋಚಿ ಆರೋಪಿಗಳು ಪರಾರಿಯಾಗಿದ್ದರು. ಈ ಪೈಕಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳೊಂದಿಗೆ ಪೊಲೀಸರು
ಇವರೊಂದಿಗಿದ್ದ ಮತ್ತಿಬ್ಬರು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಟೊಯೋಟೊ ಕಾರ್ನಲ್ಲಿ ಬಂದು ಕೃತ್ಯ ಎಸಗಿದ್ದ ಆರೋಪಿಗಳಿಂದ ಒಂದು ಕಾರು, ಎರಡು ಬೈಕ್, ಐದು ಮೊಬೈಲ್, 4.34 ಲಕ್ಷ ರೂ ನಗದು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ಲಾರಿ ಟೈರ್‌ಗಳೇ ಟಾರ್ಗೆಟ್.. ಆರು ತಿಂಗಳಲ್ಲಿ ಮೂರು ಬಾರಿ ಕಳ್ಳತನ- ಸಿಸಿಟಿವಿಯಲ್ಲಿ ದೃಶ್ಯ ಸೆರೆ