ಕೋಲಾರ:ಜಿಲ್ಲೆಯ ಮಾಲೂರು ತಾಲೂಕಿನ ದಿನ್ನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಎರಡು ಕುರಿಗಳು ಬಲಿಯಾಗಿವೆ.
ಕೋಲಾರದಲ್ಲಿ ಚಿರತೆ ದಾಳಿಗೆ ಎರಡು ಕುರಿಗಳು ಬಲಿ - ಕೋಲಾರದಲ್ಲಿ ಕುರಿಗಳ ಮೇಲೆ ಚಿರತೆ ದಾಳಿ
ಮಾಲೂರು ತಾಲೂಕಿನ ದಿನ್ನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಯಿಂದಾಗಿ ಜನರು ಆತಂಕಗೊಂಡಿದ್ದಾರೆ.

Leopard attack and killed two sheeps in Kolar
ದಿನ್ನಹಳ್ಳಿ ಗ್ರಾಮದ ನಾರಾಯಣಪ್ಪ ಎಂಬುವರಿಗೆ ಸೇರಿದ ಕುರಿಗಳು ಚಿರತೆ ದಾಳಿಯಿಂದ ಸಾವನ್ನಪ್ಪಿವೆ. ಈ ಹಿಂದೆಯೂ ಚಿರತೆ ಸುಮಾರು ಐದು ಕುರಿಗಳ ಮೇಲೆರಗಿದ್ದು, ಇಂದು ಕೂಡ ಘಟನೆ ಮರುಕಳಿಸಿದೆ. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಪದೇ ಪದೆ ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುವ ಚಿರತೆಯನ್ನು ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.