ಕರ್ನಾಟಕ

karnataka

ಧ್ರುವ ನೋಡಲು ಬಂದ ಅಭಿಮಾನಿಗಳಗೆ ಪೊಲೀಸರಿಂದ ಲಾಠಿ ಚಾರ್ಜ್​​;VIDEO

By

Published : Nov 20, 2020, 5:24 PM IST

ನಟ ಧ್ರುವ ಸರ್ಜಾ ನೋಡುವುದಕ್ಕೆ ಮುಗಿಬಿದ್ದ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿರುವಂತಹ ಘಟನೆ ಕೋಲಾರದಲ್ಲಿ ಜರುಗಿದೆ.

Lathi charge by police to fans who came to see Dhruva
ಧ್ರುವನನ್ನು ನೋಡಲು ಬಂದ ಅಭಿಮಾನಿಗಳಗೆ ಪೊಲೀಸರಿಂದ ಲಾಠಿ ಚಾರ್ಜ್​​

ಕೋಲಾರ: ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ನೋಡುವುದಕ್ಕೆ ಮುಗಿಬಿದ್ದ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿರುವಂತಹ ಘಟನೆ ಕೋಲಾರದಲ್ಲಿ ಜರುಗಿದೆ. ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಕೊಂಡಯ್ಯ ಅಂಡ್ ಸನ್ಸ್ ಅವರ ಹಾರ್ಡ್ ವೇರ್ ಮಳಿಗೆ ಪ್ರಾರಂಭೋತ್ಸವಕ್ಕೆ ಆಗಮಿಸಿದ್ದ ವೇಳೆ ನಟ ಧ್ರುವ ಸರ್ಜಾ ನೋಡಲು ಬಂದ ಅಭಿಮಾನಿಗಳಿನ್ನ ನಿಯಂತ್ರಿಸಲಾಗದೇ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.

ಧ್ರುವನನ್ನು ನೋಡಲು ಬಂದ ಅಭಿಮಾನಿಗಳಗೆ ಪೊಲೀಸರಿಂದ ಲಾಠಿ ಚಾರ್ಜ್​​

ಇನ್ನು ಅಭಿಮಾನಿಗಳನ್ನ ನಿಯಂತ್ರಿಸಲು ಪೊಲೀಸರ ಹರಸಾಹಸ ಪಡಬೇಕಾಯಿತು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆಚ್ಚಿನ ನಟ ಧ್ರುವ ಸರ್ಜಾ ಅವರನ್ನ ನೋಡಲು ಬಂದಿದ್ದು, ರಸ್ತೆಯುದ್ದಕ್ಕೂ ಅಭಿಮಾನಿಗಳು ಜಮಾಯಿಸಿದ್ರು. ಇನ್ನು ಎಸ್ಕಾರ್ಟ್ ಭದ್ರತೆಯಲ್ಲಿ ಆಗಮಿಸಿದ್ದ ಧ್ರುವ, ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳತ್ತ ನಮಸ್ಕರಿಸಿದ್ರು.

ಪೊಲೀಸರು ಲಾಠಿ ಬೀಸುತ್ತಿದ್ದಂತೆ ಅಭಿಮಾನಿಗಳು ಚದುರಿ ಹೋಗಿದ್ದು, ಚಪ್ಪಲಿ, ‌ಮಾಸ್ಕ್ ಸೇರಿದಂತೆ ಇನ್ನಿತರ ವಸ್ತುಗಳು ರಸ್ತೆಯುದ್ದಕ್ಕೂ ಬಿದ್ದಿದ್ದು ಕಂಡು ಬಂತು. ಜೊತೆಗೆ ಸ್ಥಳದಲ್ಲಿ ಕೊರೊನಾ ನಿಯಮಗಳನ್ನ ಗಾಳಿಗೆ ತೂರಿದ್ದು, ಸಾಮಾಜಿಕ ಅಂತರ ಸೇರಿದಂತೆ ಬಹುತೇಕ ಜನರು ಮಾಸ್ಕ್ ಧರಿಸದೇ ನಟನನ್ನ ನೋಡಲು ಮುಂದಾಗಿದ್ದು ಕಂಡು ಬಂತು.

ABOUT THE AUTHOR

...view details