ಕೋಲಾರ:ಜಮೀನು ಸರ್ವೇ ಮಾಡುವ ಅಧಿಕಾರಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣದಿಂದ ಕೋಲಾರ ತಾಲೂಕು ರೈತರಲ್ಲಿ ಆತಂಕ ಹೆಚ್ಚಾಗಿದೆ.
ಕೋಲಾರ ತಾಲೂಕು ಕಚೇರಿಯ ಜಮೀನು ಸರ್ವೇಯರ್ಗೆ ಸೋಂಕು: ರೈತರಲ್ಲಿ ಆತಂಕ - ತಾಲೂಕು ಕಚೇರಿ
ಕೋಲಾರ ತಾಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸರ್ವೇಯರ್ನಲ್ಲಿ ಸೋಂಕು ಕಾಣಿಸಿಕೊಂಡ ಪರಿಣಾಮ ಹಲವು ಗ್ರಾಮಗಳ ರೈತರಲ್ಲಿ ಆತಂಕ ಹೆಚ್ಚಾಗಿದೆ.
ಕೋಲಾರ ತಾಲೂಕು ಕಚೇರಿ
32 ವರ್ಷ ವಯಸ್ಸಿನ ಚಿಕ್ಕಬಳ್ಳಾಪುರದ ಚಿಂತಾಮಣಿ ಮೂಲದ ಸರ್ವೇಯರ್ ಕಳೆದ ಒಂದು ವಾರದಿಂದ ಹಲವು ರೈತರ ಜಮೀನುಗಳಿಗೆ ತೆರಳಿ ಅಲ್ಲಿ ಸರ್ವೇ ಕಾರ್ಯ, ನಕ್ಷೆ ತಯಾರಿ, ಹದ್ದುಬಸ್ತು ಮಾಡಿಕೊಟ್ಟಿದ್ದರು. ಈಗ ಅವರಲ್ಲಿ ಸೋಂಕು ದೃಢಪಟ್ಟಿದ್ದು, ಅವರು ಕೆಲಸ ಮಾಡುತ್ತಿದ್ದ ತಾಲೂಕು ಕಚೇರಿಯನ್ನು ಎರಡು ದಿನಗಳ ಕಾಲ ಸೀಲ್ಡೌನ್ ಮಾಡಲಾಗಿದೆ.
ತಾಲೂಕು ಕಚೇರಿ ಸದಾ ಜನಜಂಗುಳಿಯಿಂದ ಕೂಡಿದ್ದು, ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿದೆ ಹಾಗೂ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗಿದೆ.