ಕೋಲಾರ :ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಭೀಮಗಾನಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ರೈತರು ಬೆಳೆದ ಲಕ್ಷಾಂತರ ಮೌಲ್ಯದ ಟೋಮ್ಯಾಟೊ ಬೆಳೆ ಹಾನಿಯಾಗಿರುವ ಘಟನೆ ನಡೆದಿದೆ.
ಕೋಲಾರದಲ್ಲಿ ಕಾಡಾನೆ ದಾಳಿಯಿಂದ ಟೋಮ್ಯಾಟೊ ಹಾನಿ.. ಭೀಮಗಾನಹಳ್ಳಿ ಗ್ರಾಮದ ಅಮರೇಶ್ ಎಂಬ ರೈತ ಸಾಲಸೋಲ ಮಾಡಿ ತನ್ನ ಒಂದು ಎಕರೆ ಜಮೀನಿನಲ್ಲಿ ಟೋಮ್ಯಾಟೊ ಬೆಳೆದಿದ್ದ. ಸ್ವಲ್ಪ ದಿನಗಳಲ್ಲೇ ಫಸಲು ಬರುವ ಹಾಗಿತ್ತು. ಆದರೆ, ಕಾಡಾನೆ ದಾಳಿಯಿಂದ ಟೋಮ್ಯಾಟೊ ಬೆಳೆ ಸಂಪೂರ್ಣ ನಾಶವಾಗಿದೆ. ಇದರಿಂದ ರೈತ ಕಂಗಾಲಾಗಿದ್ದಾನೆ.
ಓದಿ: ಗಂಡನನ್ನ ಕೊಂದು ನನ್ನ ಹತ್ತಿರ ಬಾ ಅಂದಿದ್ಲಂತೆ ಆಂಟಿ.. ಕೊಲೆಗೆ ಸುಪಾರಿ ಕೊಟ್ಟ ತಾಟಗಿತ್ತಿ ಖಾಕಿ ಅತಿಥಿ
ಇದಲ್ಲದೆ ಭೀಮಗಾನಹಳ್ಳಿ ಸುತ್ತ-ಮುತ್ತಲಿನಲ್ಲಿ ಅನೇಕ ರೈತರು ಬಾಳೆ, ಮೆಣಸಿಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನ ಬೆಳೆದಿದ್ದು, ಅವುಗಳೆಲ್ಲ ಕಾಡಾನೆಗಳ ಪಾಲಾಗಿದೆ. ಈ ಹಿಂದೆಯೂ ಸಹ ಕಾಡಾನೆಗಳ ದಾಳಿಗೆ ಲಕ್ಷಾಂತರ ಮೌಲ್ಯದ ಬೆಳೆಗಳು ಹಾನಿಯಾಗಿದ್ದು, ಅರಣ್ಯ ಇಲಾಖೆ ಈ ಕಡೆ ಸುಳಿದಿಲ್ಲ.
ಸಮಸ್ಯೆ ಹೇಳಿಕೊಳ್ಳುವುದಕ್ಕೆ ಹೋದ್ರೆ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಕೂಡಲೇ ಕಾಡಾನೆಗಳಿಂದ ವಿಮುಕ್ತಿಗೊಳಿಸಿ ರೈತರಿಗೆ ಬೆಳೆ ನಷ್ಟ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದರು.