ಕರ್ನಾಟಕ

karnataka

ETV Bharat / state

ಕೊರೊನಾ ತಂದ ಆಪತ್ತು : ವಲಸೆ ಕಾರ್ಮಿಕರ ಗುಡಿಸಲು ತೆರವಿಗೆ ಗ್ರಾಮಸ್ಥರ ಆಗ್ರಹ

ಕೊರೊನಾ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋಲಾರ ತಾಲೂಕಿನ ತಲಗುಂದ ಗ್ರಾಮದ ರಸ್ತೆ ಬದಿಯಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ಹಲವಾರು ದಿನಗಳಿಂದ ಜೀವನ ಸಾಗಿಸುತ್ತಿರುವವರಿಗೆ, ಗುಡಿಸಲುಗಳನ್ನ ತೆರವುಗೊಳಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

lackdown effect
ಗುಡಿಸಲು ತೆರವುಗೊಳಿಸಲು ಗ್ರಾಮಸ್ಥರ ಆಗ್ರಹ

By

Published : May 29, 2020, 9:52 PM IST

ಕೋಲಾರ : ವಲಸೆ ಕಾರ್ಮಿಕರು ತಮ್ಮ ಗುಡಿಸಲುಗಳನ್ನ ತೆರವುಗೊಳಿಸಿ ತಮ್ಮೂರುಗಳಿಗೆ ತೆರಳುವಂತೆ ಗ್ರಾಮಸ್ಥರು ಒತ್ತಾಯಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಕೊರೊನಾ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋಲಾರ ತಾಲೂಕಿನ ತಲಗುಂದ ಗ್ರಾಮದ ರಸ್ತೆ ಬದಿಯಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ಹಲವಾರು ದಿನಗಳಿಂದ ಜೀವನ ಸಾಗಿಸುತ್ತಿರುವವರಿಗೆ, ಗುಡಿಸಲುಗಳನ್ನ ತೆರವುಗೊಳಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ಗುಡಿಸಲು ತೆರವುಗೊಳಿಸಲು ಗ್ರಾಮಸ್ಥರ ಆಗ್ರಹ

ಗ್ರಾಮದ ಬಳಿ ಬಿಜಾಪುರ, ಮೈಸೂರು ಸೇರಿದಂತೆ ವಿವಿಧ ಕಡೆಯಿಂದ ಬಂದಿದ್ದ ಸುಮಾರು 79 ಜನ 17 ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ‌ಇವರೆಲ್ಲ ಗ್ರಾಮಗಳನ್ನು ಸುತ್ತಿ ಹಳೆ ಬಟ್ಟೆಗಳ ವ್ಯಾಪಾರ ಮಾಡುತ್ತಿರುವುದರಿಂದ ಕೊರೊನಾ ಗ್ರಾಮಗಳಿಗೆ ಹರಡುತ್ತದೆ ಎಂಬ ಭೀತಿಯಿಂದ ಗ್ರಾಮಸ್ಥರು ಗುಡಿಸಲುಗಳನ್ನು ತೆರವುಗೊಳಿಸಿ ತಮ್ಮ-ತಮ್ಮ ಊರುಗಳಿಗೆ ಹೋಗುವಂತೆ ಪಟ್ಟು ಹಿಡಿದಿದ್ದಾರೆ.

ಇಷ್ಟು ದಿನ ನೆರವಾಗಿದ್ದ ಗ್ರಾಮಸ್ಥರೇ ಗುಡಿಸಲು ತೆರವುಗೊಳಿಸುವಂತೆ ಸೂಚಿಸಿದ್ದರಿಂದ ವಲಸೆ ಕಾರ್ಮಿಕರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ.

ABOUT THE AUTHOR

...view details