ಕೋಲಾರ:ಯುಗಾದಿ ಹಬ್ಬದ ಹಿನ್ನೆಲೆ ಸಾರಿಗೆ ನೌಕರನ ಕುಟುಂಬವೊಂದು ಭಿಕ್ಷೆ ಬೇಡಿ ಹಬ್ಬ ಮಾಡಲು ಮುಂದಾಗಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಬಸ್ ನಿಲ್ದಾಣದ ಬಳಿ ನಡೆದಿದೆ.
ಹಬ್ಬ ಮಾಡಲು ಹಣವಿಲ್ಲ: ತನ್ನಿಬ್ಬರು ಮಕ್ಕಳೊಂದಿಗೆ ಸಾರಿಗೆ ನೌಕರನಿಂದ ಭಿಕ್ಷಾಟನೆ - EMPLOYE FAMILY BEGGING
ಸಾರಿಗೆ ನೌಕರರು ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದು, ಇಂದು ಯುಗಾದಿ ಹಬ್ಬದ ಹಿನ್ನೆಲೆ ಹಬ್ಬ ಮಾಡುವುದಕ್ಕೆ ಹಣ ಇಲ್ಲದ ಕಾರಣ ತಾನು ತನ್ನ ಮಕ್ಕಳ ಜೊತೆ ಸೇರಿ ಭಿಕ್ಷೆ ಬೇಡುತ್ತಿರುವುದಾಗಿ ಸಾರಿಗೆ ನೌಕರ ತಿಳಿಸಿದ್ದಾನೆ.
ಭಿಕ್ಷಾಟನೆ
ಸಾರಿಗೆ ನೌಕರ ಪ್ರೇಮ್ ಕುಮಾರ್ ಎಂಬಾತ ತನ್ನಿಬ್ಬರು ಮಕ್ಕಳೊಂದಿಗೆ ಭಿಕ್ಷಾಟನೆ ಮಾಡಿ ವೇತನ ನೀಡಿ ಎಂದು ಸರ್ಕಾರವನ್ನ ಒತ್ತಾಯ ಮಾಡುತ್ತಿದ್ದಾನೆ. ಜೊತೆಗೆ ಸಂಬಳ ನೀಡಿಲ್ಲ. ಹಬ್ಬ ಮಾಡುವುದಕ್ಕೆ ಹಣ ನೀಡಿ ಎಂದು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಮಾಡುತ್ತಿದ್ದಾನೆ.
ಸಾರಿಗೆ ನೌಕರರು ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದು, ಇಂದು ಯುಗಾದಿ ಹಬ್ಬದ ಹಿನ್ನೆಲೆ ಹಬ್ಬ ಮಾಡುವುದಕ್ಕೆ ಹಣ ಇಲ್ಲದ ಕಾರಣ ತಾನು, ತನ್ನ ಮಕ್ಕಳು ಭಿಕ್ಷೆ ಬೇಡುತ್ತಿರುವುದಾಗಿ ಸಾರಿಗೆ ನೌಕರ ತಿಳಿಸಿದ್ದಾನೆ.