ಕೋಲಾರ:ಒಂದೇ ಕಾರ್ಯಕ್ರಮ ಎರಡು ಬಾರಿ ಉದ್ಘಾಟನೆಯಾಗಿದ್ದು, ಸಂಸದ ಹಾಗೂ ಸಚಿವರ ನಡುವೆ ಮುಸುಕಿನ ಗುದ್ದಾಟವಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ.
ಈ ನಡೆ ಸಂಸದ ಹಾಗೂ ಸಚಿವರ ನಡುವಿನ ಶೀತಲ ಸಮರವೋ ಅಥವಾ ಅಧಿಕಾರಿಗಳೇನಾದರೂ ಜನಪ್ರತಿನಿಧಿಗಳ ಓಲೈಕೆಗೆ ಮುಂದಾಗಿದ್ದಾರಾ ಎನ್ನುವಂತಹ ಪ್ರಶ್ನೆಗಳು ಎದ್ದಿವೆ.

ಇಂದು ಕೋಲಾರದ ಎಸ್.ಎನ್.ಆರ್. ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ 'ಕೋವಿಡ್ ಡ್ರೈ ರನ್ ಕಾರ್ಯಕ್ರಮ' ಹಮ್ಮಿಕೊಂಡಿದ್ದರು. ಅದರಂತೆ ಕಾರ್ಯಕ್ರಮಕ್ಕೆ ಮೊದಲಿಗೆ ಬಂದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಡ್ರೈ ರನ್ ಕಾರ್ಯಕ್ರಮವನ್ನ ಟೇಪ್ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಿದ್ರು. ನಂತರ ಹತ್ತು ಹದಿನೈದು ನಿಮಿಷಗಳ ನಂತರ ಬಂದ ಸಂಸದ ಎಸ್.ಮುನಿಸ್ವಾಮಿ , ಮತ್ತೆ ಟೇಪ್ ಕತ್ತರಿಸುವ ಮೂಲಕ ಎರಡನೇ ಬಾರಿಗೆ ಉದ್ಘಾಟನೆ ಮಾಡಿದ್ರು. ಈ ಮೂಲಕ ಒಂದೇ ಕಾರ್ಯಕ್ರಮಕ್ಕೆ ಎರಡೆರಡು ಬಾರಿ ಟೇಪ್ ಕತ್ತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದಾರೆ. ಇದರಿಂದ ಸಂಸದ ಹಾಗೂ ಸಚಿವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆಯಾ ಅಥವಾ ಅಧಿಕಾರಿಗಳು ಜನಪ್ರತಿನಿಧಿಗಳನ್ನ ಓಲೈಕೆ ಮಾಡಲು ಮುಂದಾದರಾ ಅನ್ನೋ ಗೊಂದಲ ಕಾರ್ಯಕ್ರಮದಲ್ಲಿ ನೆರೆದಿದ್ದವರಲ್ಲಿ ಮೂಡಿದೆ.
ಇದನ್ನೂ ಓದಿ:ಶಂಕರ್, ಎಂಟಿಬಿ, ಮುನಿರತ್ನಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ: ಸಚಿವ ಎಚ್. ನಾಗೇಶ್