ಕರ್ನಾಟಕ

karnataka

ETV Bharat / state

ಕೆಸರು ಗದ್ದೆಯಾದ ಕೋಲಾರ ಟೊಮೆಟೊ ಮಾರುಕಟ್ಟೆ: ರಸ್ತೆಗಿಳಿದು ಪ್ರತಿಭಟಿಸಿದ ವ್ಯಾಪಾರಸ್ಥರು - Kolar News 2020

ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಮಾರುಕಟ್ಟೆ ಎಂದೇ ಹೆಸರಾಗಿರುವ ಕೋಲಾರ ಟೊಮೆಟೊ ಮಾರುಕಟ್ಟೆ ಹಾಗೂ ತರಕಾರಿ ಮಾರುಕಟ್ಟೆ​ ಇದೀಗ ಕೆಸರು ಗದ್ದೆಯಂತಾಗಿದೆ.

Kolara Tommato Market Problem
ರಸ್ತೆಗಿಳಿದು ಪ್ರತಿಭಟಿಸಿದ ವ್ಯಾಪಾರಸ್ಥರು

By

Published : Jul 14, 2020, 7:35 PM IST

ಕೋಲಾರ:ನಗರದ ತರಕಾರಿ ಮಾರುಕಟ್ಟೆ ಕೆಸರು ಗದ್ದೆಯಾಗಿರುವ ಪರಿಣಾಮ ವ್ಯಾಪಾರಿಗಳು ಮತ್ತು ರೈತರು ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಿದ್ದಾರೆ.

ಕೆಸರು ಗದ್ದೆಯಾದ ಕೋಲಾರ ಟೊಮೆಟೊ ಮಾರುಕಟ್ಟೆ
ನಗರದ ಹೊರವಲಯದಲ್ಲಿರುವ ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಮಾರುಕಟ್ಟೆ ಎಂದೇ ಹೆಸರಾಗಿರುವ ಟೊಮೆಟೊ ಮಾರುಕಟ್ಟೆ ಹಾಗೂ ತರಕಾರಿ ಮಾರುಕಟ್ಟೆ ಇದೀಗ ಕೆಸರು ಗದ್ದೆಯಂತಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಮಾರುಕಟ್ಟೆ ಸಂಪೂರ್ಣ ಕೆಸರು ಮಯವಾಗಿದ್ದು, ತರಕಾರಿ ವ್ಯಾಪಾರಕ್ಕೆ ಅನಾನುಕೂಲವಾಗಿದೆ.
ಇದರಿಂದ ಬೇಸತ್ತಿರುವ ವ್ಯಾಪಾರಸ್ಥರು, ರೈತರು, ವರ್ತಕರು ಮಾರುಕಟ್ಟೆಯಲ್ಲಿ ಮೂಲಭೂತ ಸಮಸ್ಯೆಗಳನ್ನ ಬಗೆಹರಿಸುವಂತೆ ಒತ್ತಾಯಿಸಿ ರಸ್ತೆಗೆ ಅಡ್ಡಲಾಗಿ ಕುಳಿತು ಪ್ರತಿಭಟನೆ ನಡೆಸಿದರು. ಮಳೆ ಸಂದರ್ಭದಲ್ಲಿ ಮಾರುಕಟ್ಟೆ ಸಂಪೂರ್ಣ ಕೆಸರಾಗುತ್ತಿದ್ದು, ರೈತರು ಬೆಳೆದ ಬೆಳೆಗಳು ಮಾರುಕಟ್ಟೆಗೆ ಸಾಗಿಸಲಾಗದೆ ಸಮಸ್ಯೆ ಎದುರಾಗಿದೆ ಎಂದು ಅಳಲು ತೋಡಿಕೊಂಡರು.

ABOUT THE AUTHOR

...view details