ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೂತಾಂಡಹಳ್ಳಿ ಬಳಿ ಇರುವ ಮೊರಾರ್ಜಿ ವಸತಿ ಶಾಲೆಯಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿ ಅವಧಿ ಮುಗಿದಿದ್ದರೂ ಅಧಿಕಾರಿಗಳು ಮನೆಗೆ ಕಳುಹಿಸುತ್ತಿಲ್ಲ ಎಂದು ಕ್ವಾರಂಟೈನ್ಗೆ ಒಳಗಾದವರು ಆರೋಪಿದ್ದಾರೆ.
14 ದಿನ ಮುಗಿದರೂ ಮುಂದುವರಿದ ಕ್ವಾರಂಟೈನ್: ಊಟ, ನೀರು ಬಿಟ್ಟು ಮೌನ ಮುಷ್ಕರ
ಮದ್ಯಾಹ್ನದ ಊಟ, ನೀರು ಬಿಟ್ಟು ಮೌನ ಪ್ರತಿಭಟನೆ ನಡಿಸುವ ಮೂಲಕ ನಿಯೋಜಿತ ಸಿಬ್ಬಂದಿ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಬೈರಸಂದ್ರ ಹಾಗೂ ಬೆಳಗಾನಹಳ್ಳಿ ಗ್ರಾಮದ ಸುಮಾರು 40ಕ್ಕೂ ಹೆಚ್ಚು ಜನರು ಕೂತಾಂಡಹಳ್ಳಿಯ ಕ್ವಾರಂಟೈನ್ ಕೇಂದ್ರದಲ್ಲಿ ಧರಣಿ ಮಾಡಿದರು.
ಅವಧಿ ಮುಗಿದರು ಮನೆಗೆ ಕಳುಹಿಸದ ಅಧಿಕಾರಿಗಳು, ಊಟ-ನೀರು ಬಿಟ್ಟು ಧರಣಿ ನಡೆಸಿದ ಕ್ವಾರಂಟೇನಿಗರು
ಮದ್ಯಾಹ್ನದ ಊಟ, ನೀರು ಬಿಟ್ಟು ಮೌನ ಪ್ರತಿಭಟನೆ ನಡಿಸುವ ಮೂಲಕ ನಿಯೋಜಿತ ಸಿಬ್ಬಂದಿ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಬೈರಸಂದ್ರ ಹಾಗೂ ಬೆಳಗಾನಹಳ್ಳಿ ಗ್ರಾಮದ ಸುಮಾರು 40ಕ್ಕೂ ಹೆಚ್ಚು ಜನರು ಧರಣಿ ಮಾಡಿದರು.
ಕಳೆದ 17 ದಿನಗಳಿಂದ ಕುಟುಂಬಸ್ಥರು, ಮಕ್ಕಳನ್ನು ನೋಡದೆ ಕ್ವಾರಂಟೈನ್ನಲ್ಲಿ ಇದ್ದೇವೆ. ಅವಧಿ ಮುಗಿದಿದ್ದರೂ ಅಧಿಕಾರಿಗಳು ನಮ್ಮನ್ನು ಮನೆಗೆ ಕಳುಹಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.