ಕರ್ನಾಟಕ

karnataka

ETV Bharat / state

ಕೋಲಾರ: ಬೈಕ್​​ನಲ್ಲಿ ತೆರಳುತ್ತಿದ್ದ ವ್ಯಕ್ತಿ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ! - ಅಡಿಷನಲ್ ಎಸ್ಪಿ ಜಾನವಿ ಹಾಗು ಅವರ ತಂಡ ಭೇಟಿ

ಮಾಲೂರು ತಾಲೂಕಿನ ಗೊಲ್ಲಹಳ್ಳಿ ಗ್ರಾಮದ ಹರೀಶ್ ರೆಡ್ಡಿ ಎಂಬುವರು ಸಂಪಂಗೆರೆ ಮಾರ್ಗವಾಗಿ ಬೈಕ್​ನಲ್ಲಿ ತೆರಳುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಬಂದೂಕಿನಿಂದ ಗುಂಡು ಹಾರಿಸಿದ್ದಾರೆ.

kolara bike rider shotout news
ಬೈಕ್​​ನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಅಪರಿಚಿತರಿಂದ ಗುಂಡಿನ ದಾಳಿ...

By

Published : Dec 4, 2020, 6:11 PM IST

ಕೋಲಾರ:ಬೈಕ್​ನಲ್ಲಿ ತೆರಳುತ್ತಿದ್ದ ವ್ಯಕ್ತಿಯೋರ್ವನ ಮೇಲೆ ಅಪರಿಚಿತರು ಬಂದೂಕಿನಿಂದ ಗುಂಡು ಹಾರಿಸಿದ್ದು, ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಸಂಪಂಗೆರೆ ಸಮೀಪ ನಡೆದಿದೆ.

ಸವಾರ ಹರೀಶ್ ರೆಡ್ಡಿ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು ಮಾಲೂರು ತಾಲೂಕಿನ ಗೊಲ್ಲಹಳ್ಳಿ ಗ್ರಾಮದ ಹರೀಶ್ ರೆಡ್ಡಿ ಸಂಪಂಗೆರೆ ಮಾರ್ಗವಾಗಿ ಬೈಕ್​​ನಲ್ಲಿ ತೆರಳುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಈತ ಸಂಪಂಗೆರೆ ಗ್ರಾಮದ ಬಳಿ ನವ ಚೈತನ್ಯ ಎಂಬ ಫೌಂಡೇಶನ್ ಸ್ಥಾಪಿಸಿದ್ದು, ಮದ್ಯ ತ್ಯಜಿಸುವ ಕೇಂದ್ರ ತೆರೆದಿದ್ದ.

ಓದಿ: ಬೆಂಗಳೂರು: ಸ್ನೇಹಿತನಿಂದಲೇ ತಡರಾತ್ರಿ ವ್ಯಕ್ತಿಯ ಕೊಲೆ

ಹೀಗಾಗಿ ಗ್ರಾಮದಿಂದ ಕೇಂದ್ರಕ್ಕೆ ಬೈಕ್​​ನಲ್ಲಿ ತೆರಳುತ್ತಿದ್ದ ವೇಳೆ ಅಪರಿಚಿತರು ಬೇಟೆಯಾಡಲು ಬಳಕೆ ಮಾಡುವ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಬಂದೂಕಿನ ಗುಂಡು ಬೈಕ್​​ನ ಕನ್ನಡಿಗೆ ಸಣ್ಣ‌ ಪ್ರಮಾಣದಲ್ಲಿ ತಾಕಿದೆ. ಈ ಹಿನ್ನೆಲೆ ಬೈಕ್​ನಿಂದ ಕೆಳಗೆ ಬಿದ್ದ ಪರಿಣಾಮ ಬೈಕ್ ಸವಾರ ಹರೀಶ್‌ ರೆಡ್ಡಿಯ ಬಲಗೈಗೆ ಸಣ್ಣಪುಟ್ಟ ಗಾಯಗಳಾಗಿವೆ.

ಇನ್ನು ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಬಂದೂಕಿನಿಂದ ಹೊರ ಬಂದ ಗುಂಡುಗಳನ್ನು ಪತ್ತೆ ಹಚ್ಚಿದ್ದು, ಬೇಟೆಗಾಗಿ ಬಳಕೆ ಮಾಡುತ್ತಿದ್ದ ಬಂದೂಕು ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಅಡಿಷನಲ್ ಎಸ್ಪಿ ಜಾನ್ಹವಿ ಹಾಗೂ ಅವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹರೀಶ್ ರೆಡ್ಡಿಯ ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details