ಕೋಲಾರ :ಜಿಲ್ಲೆಯಲ್ಲಿ ಸಾರಿಗೆ ಇಲಾಖೆಯು ಕೊರೊನಾ ನಿಯಮಗಳನ್ನು ಗಾಳಿ ತೂರಿದಂತೆ ಗೋಚರಿಸುತ್ತಿದೆ. ಕೋಲಾರದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಸಾಮಾಜಿಕ ಅಂತರವಿಲ್ಲದೆ ಪ್ರಯಾಣಿಕರನ್ನ ತುಂಬಿಕೊಂಡು ಹೋಗಲಾಗುತ್ತಿದ್ದು, ಈ ದೃಶ್ಯವನ್ನ ಪ್ರಯಾಣಿಕನೋರ್ವ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ಪ್ರತಿದಿನ 5 ಸಾವಿರ ಮಂದಿ ಬೆಂಗಳೂರಿಗೆ ಪ್ರಯಾಣ : ಎಚ್ಚರಿಕೆ ಕೈಗೊಳ್ಳದ ಕೋಲಾರ ಸಾರಿಗೆ ಇಲಾಖೆ - ಕೊರೊನಾ ಸುದ್ದಿ
ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ಕೋಲಾರಕ್ಕೆ ಕಂಟಕವಾಗಿದ್ದ ಬೆಂಗಳೂರು, ಲಾಕ್ಡೌನ್ ಬಳಿಕ ಕೊಂಚ ಚೇತರಿಕೆ ಕಂಡು ಬಂದಿತ್ತು. ಆದರೆ, ಇದೀಗ ಮತ್ತೆ ಭಯದ ವಾತಾವರಣ ನಿರ್ಮಾಣವಾಗಿದೆ. ಇನ್ನು, ಬೆಂಗಳೂರಿಗೆ ಹೋಗಿ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಯಾಣಿಕರು ಮನವಿ ಮಾಡಿಕೊಳ್ಳುತ್ತಿದ್ದಾರೆ..
ರಾಜ್ಯ ಸರ್ಕಾರ ಸಾರಿಗೆ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿ ಕೆಲವು ಮಾರ್ಗಸೂಚಿಗಳನ್ನ ಅನುಸರಿಬೇಕೆಂದು ಆದೇಶ ನೀಡಿದೆ. ಆದರೆ, ಸಾರಿಗೆ ಇಲಾಖೆ ಮಾತ್ರ ನಿರ್ಲಕ್ಷ್ಯ ತೋರುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪ್ರತಿದಿನ 5 ಸಾವಿರಕ್ಕೂ ಹೆಚ್ಚು ಜನರು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದು, ಕೊರೊನಾ ಹರಡುವ ಭೀತಿ ಹೆಚ್ಚಾಗಿದೆ.
ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ಕೋಲಾರಕ್ಕೆ ಕಂಟಕವಾಗಿದ್ದ ಬೆಂಗಳೂರು, ಲಾಕ್ಡೌನ್ ಬಳಿಕ ಕೊಂಚ ಚೇತರಿಕೆ ಕಂಡು ಬಂದಿತ್ತು. ಆದರೆ, ಇದೀಗ ಮತ್ತೆ ಭಯದ ವಾತಾವರಣ ನಿರ್ಮಾಣವಾಗಿದೆ. ಇನ್ನು, ಬೆಂಗಳೂರಿಗೆ ಹೋಗಿ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಯಾಣಿಕರು ಮನವಿ ಮಾಡಿಕೊಳ್ಳುತ್ತಿದ್ದಾರೆ.