ಕರ್ನಾಟಕ

karnataka

ETV Bharat / state

ಕೋಲಾರ: ಆಟೋ ಗಾಜು ಒಡೆದು ಚಾಲಕನ ಮೇಲೆ ಹಲ್ಲೆ ನಡೆಸಿದ ಮಂಗಳಮುಖಿಯರು - assault on driver

ಆಟೋ ಚಾಲಕನ ಮೇಲೆ ಮಂಗಳಮುಖಿಯರು ಹಲ್ಲೆ ನಡೆಸಿ, ಆತನ ಆಟೋ ಗಾಜನ್ನು ಧ್ವಂಸಗೊಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು ಮಂಗಳಮುಖಿಯರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಹಲ್ಲೆ
ಹಲ್ಲೆ

By

Published : Mar 1, 2021, 5:34 PM IST

ಕೋಲಾರ:ಕ್ಷುಲ್ಲಕ ಕಾರಣಕ್ಕೆ‌ ಆಟೋ‌ ಚಾಲಕನ ಮೇಲೆ ಮೂವರು ಮಂಗಳಮುಖಿಯರು ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಅರಾಭಿಕೊತ್ತನೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದಿದೆ.

ಆಟೋ ಚಾಲಕನ ಮೇಲೆ ಮಂಗಳಮುಖಿಯರು ಹಲ್ಲೆ ನಡೆಸಿ, ಆತನ ಆಟೋ ಮುಂಭಾಗದ ಗಾಜನ್ನು ಧ್ವಂಸಗೊಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು ಮಂಗಳಮುಖಿಯರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೇ ಆಕ್ರೋಶಗೊಂಡ ಜನರ ಗುಂಪು ಮಂಗಳಮುಖಿಯರ ಮನೆಗೆ ಮುತ್ತಿಗೆ ಹಾಕಿದಾಗ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.

ಆಟೋ ಗಾಜು ಹೊಡೆದು ಚಾಲಕನ ಮೇಲೆ ಹಲ್ಲೆ ನಡೆಸಿದ ಮಂಗಳಮುಖಿಯರು

ಇದನ್ನೂ ಓದಿ..ಪಂಚಮಸಾಲಿ 2ಎ ಗೆ ಸೇರಿಸಲು ಆಗ್ರಹ: ನಾಳೆಯಿಂದ ಪತ್ರ ಚಳುವಳಿ

ಒಂಟಿಯಾಗಿ ಸಿಕ್ಕವರ ಮೇಲೆ ಹಲ್ಲೆ ಮಾಡುವುದು, ಸುಲಿಗೆ ಮಾಡುವುದು ಹಾಗೂ ಶೋಷಣೆ ಮಾಡುವುದು ಹೆಚ್ಚಾಗುತ್ತಿದ್ದು, ಮನೆ ಖಾಲಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಪು ಕಟ್ಟಿದ್ದ ಜನರನ್ನು ಚದುರಿಸಿ ಸ್ಥಳ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ABOUT THE AUTHOR

...view details