ಕೋಲಾರ:ಲಾಕ್‌ಡೌನ್ ನಡುವೆಯೂಮಸೀದಿಯೊಳಗೆನಮಾಜ್ ಮಾಡುತ್ತಿದ್ದವರನ್ನಮಹಿಳಾ ತಹಶೀಲ್ದಾರ್ ವಶಕ್ಕೆ ಪಡೆದ ಘಟನೆ ನಡೆದಿದೆ. ಕೋಲಾರ ನಗರ ತಹಶೀಲ್ದಾರ್ ಶೋಭಿತಾ ಮಸೀದಿಯೊಳಗಿದ್ದವರ ಚಳಿ ಬಿಡಿಸಿದ್ದಾರೆ.
ಮಸೀದಿಯೊಳಗೆ ನಮಾಜ್ ಮಾಡುತ್ತಿದ್ದವರನ್ನು ವಶಕ್ಕೆ ಪಡೆದ ಲೇಡಿ ತಹಶೀಲ್ದಾರ್..
ಮಹಿಳೆಯರಿಗೆ ಮಸೀದಿಯೊಳಗೆ ನಿರ್ಬಂಧವಿದೆ. ಆದರೆ, ಕೋಲಾರ ತಹಶೀಲ್ದಾರ್ ಮಾತ್ರ ಆ ಸಂಪ್ರದಾಯ ಮುರಿದು ದಿಟ್ಟ ಹೆಜ್ಜೆ ಇರಿಸಿದ್ದಾರೆ.
ತಹಶೀಲ್ದಾರ್ ಶೋಭಿತ
ಲಾಕ್‌ಡೌನ್ ಹಿನ್ನೆಲೆ ಕೋಲಾರ ಜಿಲ್ಲೆಯಾದ್ಯಂತ ದೇವಸ್ಥಾನ,ಚರ್ಚ್, ಮಸೀದಿಗಳಿಗೆ ಜಿಲ್ಲಾಡಳಿತದ ವತಿಯಿಂದ ನಿರ್ಬಂಧವಿದೆ. ಆದರೂ ಜಿಲ್ಲಾಡಳಿತ ಕಣ್ತಪ್ಪಿಸಿ ನಿನ್ನೆ ಸಂಜೆ ಕೋಲಾರ ನಗರದ ಮುನಿಸಿಪಲ್ ಆಸ್ಪತ್ರೆಯ ಮುಂಭಾಗ ಇರುವ ಮಸೀದಿಯೊಳಗೆ ನಮಾಜ್ ಮಾಡಲಾಗುತ್ತಿತ್ತು.
ಈ ಮಧ್ಯೆ ಮಸೀದಿಗೆ ದಾಳಿ ನಡೆಸಿದ ತಹಶೀಲ್ದಾರ್ ಶೋಭಿತ ಅವರು, ನಮಾಜ್ ಮಾಡುತ್ತಿದ್ದ ಸುಮಾರು 11 ಜನರನ್ನ ವಶಕ್ಕೆ ಪಡೆದು ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದೀಗ ಶೋಭಿತ ಅವರು ದಾಳಿ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
Last Updated : May 1, 2020, 4:07 PM IST