ಕರ್ನಾಟಕ

karnataka

ETV Bharat / state

6 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ಆರೋಪ: ವೃದ್ಧನ ಬಂಧನ - ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ

6 ವರ್ಷದ ಬಾಲಕಿಗೆ ಚಾಕೋಲೇಟ್​ ಆಸೆ ತೋರಿಸಿ 60 ವರ್ಷದ ವೃದ್ಧನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಕೋಲಾರದಲ್ಲಿ ನಡೆದಿದೆ.

-old-man-tried-to-rape-on-6-year-girl
ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ ವೃದ್ದನ ಅರೆಸ್ಟ್

By

Published : Feb 25, 2021, 3:11 PM IST

ಕೋಲಾರ:ಆರು ವರ್ಷದ ಬಾಲಕಿ ಮೇಲೆ 60 ವರ್ಷ ವಯಸ್ಸಿನ ವೃದ್ಧನೋರ್ವ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ.

ಓದಿ: 5 ವರ್ಷದ ಬಾಲಕಿ ಮೇಲೆ 60 ವರ್ಷದ ವ್ಯಕ್ತಿಯಿಂದ ಅತ್ಯಾಚಾರ ಯತ್ನ, ವಿಷ ಸೇವನೆ

60 ವಯಸ್ಸಿನ ತಿಮ್ಮಪ್ಪ ಎಂಬುವನಿಂದ ಕೃತ್ಯ ನಡೆದಿದ್ದು, ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ಬಾಲಕಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಪಂ ಸದಸ್ಯ ಕುಮಾರ್ ಎಂಬುವನ ತಂದೆ ಆರೋಪಿ ತಿಮ್ಮಪ್ಪ, ಬಾಲಕಿಗೆ ಚಾಕೋಲೇಟ್ ಕೊಡಿಸುವ ನೆಪದಲ್ಲಿ ನಿನ್ನೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.

ಮಗುವಿನ ತಾಯಿ ಕೂಲಿ ಕೆಲಸಕ್ಕೆಂದು ಹೋಗಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಪೊಲೀಸರಿಗೆ ದೂರು ನೀಡದಂತೆ ಆರೋಪಿ ಮಗ ಗ್ರಾಪಂ ಸದಸ್ಯ ಕುಮಾರ್​ನಿಂದ ಪೋಷಕರಿಗೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details