ಕೋಲಾರ: ಅಕ್ಕ-ತಂಗಿ ಇಬ್ಬರನ್ನೂ ಒಬ್ಬನೇ ಮದುವೆಯಾಗಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ತಂಗಿಗೆ ಇನ್ನೂ 18 ತುಂಬಿಲ್ಲ. ಹೀಗಾಗಿ ಅಪ್ರಾಪ್ತೆಯನ್ನು ವರಿಸಿದ್ದಕ್ಕಾಗಿ ವರ ಉಮಾಪತಿ ಸೇರಿದಂತೆ ಒಟ್ಟು 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಕ್ಕ, ತಂಗಿಯನ್ನು ಮದುವೆಯಾದ ಉಮಾ'ಪತಿ' ಬಂಧನ..ಕಾರಣ ಏನು? - ಅಕ್ಕತಂಗಿ ಮದುವೆ ಪ್ರಕರಣ
ಮದುವೆ ಕುರಿತು ಪರಿಶೀಲನೆ ನಡೆಸಲು ಡಿಸಿ ಆರ್. ಸೆಲ್ವಮಣಿಯವರು ಆದೇಶಿಸಿದ್ದರು. ಸದ್ಯ ಮದುವೆಯಾಗಿ ಸಹೋದರಿಯರ ಪೈಕಿ ತಂಗಿ ಲಲಿತ ಅಪ್ರಾಪ್ತೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಏಳು ಜನರ ವಿರುದ್ಧ ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
![ಅಕ್ಕ, ತಂಗಿಯನ್ನು ಮದುವೆಯಾದ ಉಮಾ'ಪತಿ' ಬಂಧನ..ಕಾರಣ ಏನು? kolar-sisters-marriage-one-guy-viral](https://etvbharatimages.akamaized.net/etvbharat/prod-images/768-512-11784598-thumbnail-3x2-kdkd.jpg)
ಡಬಲ್ ಮದುವೆ
ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ, ಕಳೆದ ಮೇ 7ರಂದು ಸುಪ್ರಿಯಾ ಮತ್ತು ಲಲಿತಾ ಎಂಬ ಅಕ್ಕ-ತಂಗಿಯರು, ಉಮಾಪತಿಯನ್ನು ವರಿಸಿದ್ದರು. ಈ ಜೋಡಿಯ ಮದುವೆ ಫೋಟೊಗಳು ಹಾಗೂ ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮದುವೆ ಕುರಿತು ಪರಿಶೀಲನೆ ನಡೆಸಲು ಡಿಸಿ ಆರ್. ಸೆಲ್ವಮಣಿಯವರು ಆದೇಶಿಸಿದ್ದರು. ಸದ್ಯ ಮದುವೆಯಾಗಿರುವ ಸಹೋದರಿಯರ ಪೈಕಿ ತಂಗಿ ಲಲಿತಾ ಅಪ್ರಾಪ್ತೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಏಳು ಜನರ ವಿರುದ್ಧ ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Last Updated : May 17, 2021, 8:19 AM IST