ಕರ್ನಾಟಕ

karnataka

ETV Bharat / state

ರಸ್ತೆ ಅಗಲೀಕರಣಕ್ಕೆ ನೂರೆಂಟು ವಿಘ್ನ: ಸಂಕಷ್ಟದಲ್ಲಿ ಸ್ಥಳೀಯರು

ಕೋಲಾರ ನಗರದಲ್ಲಿ ಅತಿ ಹೆಚ್ಚು ಜನಸಂದಣಿಯಿಂದ ಕೂಡಿರುವ, ಹೆಚ್ಚು ಟ್ರಾಫಿಕ್​ ಸಮಸ್ಯೆ ಎದುರಿಸುತ್ತಿರುವ ರಸ್ತೆಗಳ ಅಗಲೀಕರಣಕ್ಕೆ ಮಾರ್ಕಿಂಗ್ ಕೆಲಸ ಮಾಡಲಾಗಿದೆ. ಅದರೆ ಮಾರ್ಕಿಂಗ್​ ಮಾಡಿದ ನಂತರ ವ್ಯಾಪಾರಸ್ಥರು ನ್ಯಾಯಾಲಯದ ಮೊರೆ ಹೋಗಿ ಅಗಲೀಕರಣ ಕಾಮಗಾರಿಗೆ ತಡೆಯಾಜ್ಞೆ ತಂದಿದ್ದಾರೆ.

ಕೋಲಾರ ರಸ್ತೆ ಅಗಲೀಕರಣ ಕಾಮಗಾರಿ ವಿಳಂಬ
ಕೋಲಾರ ರಸ್ತೆ ಅಗಲೀಕರಣ ಕಾಮಗಾರಿ ವಿಳಂಬ

By

Published : Feb 7, 2021, 3:54 PM IST

ಕೋಲಾರ: ಕಳೆದ ಹತ್ತಾರು ವರ್ಷಗಳಿಂದ ನಗರದ ಪ್ರಮುಖ ರಸ್ತೆಗಳಾದ ಎಂಜಿ ರೋಡ್​, ದೊಡ್ಡಪೇಟೆ, ಕಾಳಮ್ಮಗುಡಿ, ಶಾರದಾ ಟಾಕೀಸ್​ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನ ಹಾಗೂ ಜನದಟ್ಟಣೆ ಹೆಚ್ಚಾಗಿದ್ದು, ಓಡಾಡಲು ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಕೋಲಾರ ರಸ್ತೆ ಅಗಲೀಕರಣ ಕಾಮಗಾರಿ ವಿಳಂಬ

ಕೆಲವೆಡೆ ರಸ್ತೆಗಳು ಒತ್ತುವರಿಯಾಗಿದ್ದರೆ, ಮತ್ತೆ ಕೆಲವೆಡೆ ರಸ್ತೆಗಳ ಅಗಲೀಕರಣದ ಅವಶ್ಯಕತೆ ಇದೆ. ಅದಕ್ಕಾಗಿ ಜಿಲ್ಲಾಡಳಿತ ಈಗಾಗಲೇ ಮೂರು, ನಾಲ್ಕು ಬಾರಿ ರಸ್ತೆ ಅಗಲೀಕರಣಕ್ಕೆ ಮಾರ್ಕಿಂಗ್​ ಮಾಡುವ ಕೆಲಸ ಮಾಡಿದೆ. ಆದರೂ ಅಗಲೀಕರಣ ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಅಂಗಡಿಗಳ ಮಾಲೀಕರು ಹಾಗೂ ಜಿಲ್ಲಾಡಳಿತ ನಡುವಿನ ಸಾಮರಸ್ಯದ ಕೊರತೆ ಎನ್ನಲಾಗಿದೆ.

ಇನ್ನು ಅಂಗಡಿಗಳ ಮಾಲೀಕರು ರಸ್ತೆ ಅಗಲೀಕರಣ ಮಾಡುವುದಾದರೆ ನಮಗೆ ಇಂದಿನ ಮಾರುಕಟ್ಟೆ ಬೆಲೆ ಏನಿದೆ ಅದರಂತೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ನಾವು ಅಗಲೀಕರಣ ಮಾಡಲು ಬಿಡೋದಿಲ್ಲ ಎಂದು ಹೈಕೋರ್ಟ್​ನಿಂದ ತಡೆಯಾಜ್ಞೆ ತಂದಿದ್ದಾರೆ. ಪರಿಣಾಮ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದ ಜಿಲ್ಲಾಡಳಿತದ ಕೈ ಕಟ್ಟಿಹಾಕಿದಂತಾಗಿದೆ. ಜೊತೆಗೆ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಳಪೆಯಿಂದ ಕೂಡಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಜಿಲ್ಲಾಡಳಿತದ ಸೂಚನೆ ಮೇರೆಗೆ ಈಗಾಗಲೇ ಕೋಲಾರ ನಗರಸಭೆಯಿಂದ ಕೋಲಾರ ನಗರದಲ್ಲಿ ಅತಿಹೆಚ್ಚು ಜನಸಂದಣಿಯಿಂದ ಕೂಡಿರುವ, ಹೆಚ್ಚು ಟ್ರಾಫಿಕ್​ ಸಮಸ್ಯೆ ಎದುರಿಸುತ್ತಿರುವ ರಸ್ತೆಗಳ ಅಗಲೀಕರಣಕ್ಕೆ ಮಾರ್ಕಿಂಗ್ ಕೆಲಸ ಮಾಡಲಾಗಿದೆ. ಅದರೆ ಮಾರ್ಕಿಂಗ್​ ಮಾಡಿದ ನಂತರ ವ್ಯಾಪಾರಸ್ಥರು ಕೊರೊನಾ ಹಿನ್ನೆಲೆ ಸಾಕಷ್ಟು ನಷ್ಟದಲ್ಲಿದ್ದೇವೆ. ಈ ಸಂದರ್ಭದಲ್ಲಿ ರಸ್ತೆ ಅಗಲೀಕರಣ ಕೆಲಸ ಮಾಡಿದರೆ ನಮಗೆ ತೊಂದರೆಯಾಗುತ್ತದೆ ಎಂದು ನ್ಯಾಯಾಲಯದ ಮೊರೆ ಹೋಗಿ ಅಗಲೀಕರಣ ಕಾಮಗಾರಿಗೆ ತಡೆಯಾಜ್ಞೆ ತಂದಿದ್ದಾರೆ. ನ್ಯಾಯಾಲಯದ ಅದೇಶದ ಮೇರೆಗೆ ಕಾಮಗಾರಿ ನಿಲ್ಲಿಸಲಾಗಿದೆ. ನ್ಯಾಯಾಲಯ ಅನುಮತಿ ನೀಡಿದ ನಂತರ ಕೆಲಸ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details