ಕರ್ನಾಟಕ

karnataka

ETV Bharat / state

ಪೊಲೀಸ್​ ಶ್ವಾನ 'ತೇಜಸ್​' ಕ್ಯಾನ್ಸರ್​ಗೆ ಬಲಿ - ಕೋಲಾರ ಪೊಲೀಸ್​ ಶ್ವಾನ ಸಾವು ಸುದ್ದಿ

ತೇಜಸ್​ ಇಂದು ಮುಂಜಾನೆ ಕೋಲಾರದ ಸಶಸ್ತ್ರ ಮೀಸಲು ಪಡೆ ಕಚೇರಿಯಲ್ಲಿ ಮೃತಪಟ್ಟಿದೆ. ಶ್ವಾನಕ್ಕೆ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಿ ಅಂತ್ಯ ಸಂಸ್ಕಾರ ಮಾಡಲಾಗಿದೆ..

ಪೊಲೀಸ್​ ಶ್ವಾನ ತೇಜಸ್​
ಪೊಲೀಸ್​ ಶ್ವಾನ ತೇಜಸ್​

By

Published : Nov 29, 2020, 6:15 PM IST

ಕೋಲಾರ: ಕೋಲಾರದ ಬಾಂಬ್ ನಿಷ್ಕ್ರಿಯ ದಳದಲ್ಲಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಪೊಲೀಸ್​ ಶ್ವಾನವೊಂದು ಇಂದು ಮೃತಪಟ್ಟಿದೆ.

27 ಸೆಪ್ಟಂಬರ್​ 2015ರಲ್ಲಿ ಜನಿಸಿದ್ದ ತೇಜಸ್​ ಹೆಸರಿನ ಈ ನಾಯಿ ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್​ ರೋಗದಿಂದ ಬಳಲುತ್ತಿತ್ತು. ನಾಯಿಗೆ ಸೂಕ್ತ ಚಿಕಿತ್ಸೆಯನ್ನು ನೀಡಿದ್ದ ಪರಿಣಾಮ ಎರಡು ವರ್ಷಗಳಿಂದ ರೋಗವಿದ್ದರೂ ಉತ್ತಮ ಕೆಲಸ ಮಾಡಿ ಇಲಾಖೆಯಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿತ್ತು.

ರಾಜ್ಯಾದ್ಯಂತ ಹಲವೆಡೆ ಕೆಲಸ ಮಾಡಿರುವ ಈ ಶ್ವಾನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸುಮಾರು ಐಪಿಎಲ್​ ಮ್ಯಾಚ್​ಗಳ ಸಂದರ್ಭದಲ್ಲಿ ಬಾಂಬ್​ ನಿಷ್ಕ್ರಿಯ ದಳದ ಜೊತೆಗೆ ಕೆಲಸ ಮಾಡಿತ್ತು. ಅಷ್ಟೇ ಅಲ್ಲ, ಪ್ರಧಾನಮಂತ್ರಿಗಳು, ಹಲವು ಮುಖ್ಯಮಂತ್ರಿಗಳ ಕಾರ್ಯಕ್ರಮಗಳಲ್ಲಿ ಈ ತೇಜಸ್ ಶ್ವಾನ ಕೆಲಸ ಮಾಡಿತ್ತು.

ತೇಜಸ್​ ಇಂದು ಮುಂಜಾನೆ ಕೋಲಾರದ ಸಶಸ್ತ್ರ ಮೀಸಲು ಪಡೆ ಕಚೇರಿಯಲ್ಲಿ ಮೃತಪಟ್ಟಿದೆ. ಶ್ವಾನಕ್ಕೆ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ಮೂರು ಸುತ್ತು ಕುಶಾಲು ತೋಪು ಸಿಡಿಸಿ ಪೊಲೀಸ್​ ಸಿಬ್ಬಂದಿ ಮೃತ ಶ್ವಾನಕ್ಕೆ ಗೌರವ ನಮನ ಸಲ್ಲಿಸಿದ್ದಾರೆ.

ABOUT THE AUTHOR

...view details