ಕರ್ನಾಟಕ

karnataka

ETV Bharat / state

ಲಾಕ್‌ಡೌನ್​ ಉಲ್ಲಂಘಿಸಿದವರಿಗೆ ಪೊಲೀಸರ ಪಾಠ: 30 ಕ್ಕೂ ಹೆಚ್ಚು ಬೈಕ್‌ಗಳು​ ವಶ - kolar police awareness news

ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ವೃತ್ತದಲ್ಲಿ ವಾಹನಗಳನ್ನು ಅಡ್ಡಗಟ್ಟಿ ತಪಾಸಣೆ ನಡೆಸುತ್ತಿರುವ ಪೊಲೀಸರು, ಲಾಕ್​ಡೌನ್ ಆದೇಶ ಉಲ್ಲಂಘಿಸುವ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ.

kolar police awareness
ಲಾಕ್​ ಡೌನ್​ ಆದೇಶ ಉಲ್ಲಂಘಿಸಿದವರಿಗೆ ಪೊಲೀಸರಿಂದ ಪಾಠ

By

Published : Apr 7, 2020, 1:54 PM IST

Updated : Apr 7, 2020, 3:05 PM IST

ಕೋಲಾರ : ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ವೃತ್ತದಲ್ಲಿ ವಾಹನಗಳನ್ನು ಅಡ್ಡಗಟ್ಟಿ ತಪಾಸಣೆ ನಡೆಸುತ್ತಿರುವ ಪೊಲೀಸರು, ಆದೇಶ ಗಾಳಿಗೆ ತೂರಿ ಸಂಚರಿಸುವ ಸವಾರರ ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ.

ಲಾಕ್‌ಡೌನ್ ಆದೇಶ ಉಲ್ಲಂಘಿಸಿ ರೋಡಿಗಳಿದ ಸುಮಾರು 30 ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ವಾಹನ ಸವಾರರಿಗೆ ಕೊರೊನಾ ಪಾಠ ಮಾಡುತ್ತಿದ್ದಾರೆ. ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿದ್ದು, ಸಾರ್ವಜನಿಕರು ಸರ್ಕಾರಗಳೊಂದಿಗೆ ಕೈ ಜೋಡಿಸಬೇಕು. ಸರ್ಕಾರದ ಆದೇಶಕ್ಕೆ ಬದ್ದರಾಗಿರಬೇಕೆಂದು ವಾಹನ ಸವಾರರಿಗೆ ಸೂಚನೆ ನೀಡಿದರು.

ಬೀದಿಗೆ ಬಂದು ಪ್ರಾಣ ಕಳೆದುಕೊಳ್ಳುವ ಬದಲಾಗಿ ಮನೆಯಲ್ಲಿಯೇ ಇದ್ದು ಪ್ರಾಣ ಉಳಿಸಿಕೊಳ್ಳಿ ಎಂದು ಸವಾರರಿಗೆ ಎಚ್ಚರಿಕೆ ಕೊಟ್ಟರು.

Last Updated : Apr 7, 2020, 3:05 PM IST

ABOUT THE AUTHOR

...view details