ಕೋಲಾರ :ಮಾಲೂರು ನನ್ನ ಕರ್ಮ ಭೂಮಿ ಇಲ್ಲಿನ ಜನರು ಬಿಜೆಪಿ ಪಕ್ಷವನ್ನು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ. ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರುತ್ತಿದ್ದು, ಈ ಬಾರಿ ಕೋಲಾರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ದೆಹಲಿಗೆ ಹೋಗುವುದು ಖಚಿತವೆಂದು ಅಭ್ಯರ್ಥಿ ಎಸ್.ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಮಾಲೂರಿನ ಮಾರಿಕಾಂಬ ದೇವಾಲಯ, ಬಸವಣ್ಣ ದೇವಾಲಯ ಮತ್ತು ಧರ್ಮರಾಯಸ್ವಾಮಿ ದೇವಾಲಯಗಳಿಗೆ ಎಸ್. ಮುನಿಸ್ವಾಮಿ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮತಯಾಚಿಸಿದರು.