ETV Bharat Karnataka

ಕರ್ನಾಟಕ

karnataka

ETV Bharat / state

ಕೋಲಾರ ನಗರಸಭೆ, ಅಬಕಾರಿ ಆಯುಕ್ತರ ಕಚೇರಿ, ಪೊಲೀಸ್ ಠಾಣೆ ಸೀಲ್​ಡೌನ್ - Kolar coronavirus news

ಕೋಲಾರದ ಗಲ್‌ಪೇಟೆ ಪೊಲೀಸ್​ ಕಾನ್ಸ್​ಟೇಬಲ್​ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಪರಿಣಾಮ, ಗಲ್‌ಪೇಟೆ ಪೊಲೀಸ್ ಠಾಣೆಯನ್ನು ಮೂರು ದಿನಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ. ಅಬಕಾರಿ ಇಲಾಖೆಯ ನಾಲ್ಕು ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಕೋಲಾರ ಅಬಕಾರಿ ಆಯುಕ್ತರ ಕಚೇರಿಯನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಲಾಗಿದೆ.

ಕೋಲಾರದಲ್ಲಿ ಕೊರೊನಾ ವೈರಸ್ ನ್ಯೂಸ್
author img

By

Published : Jul 28, 2020, 6:11 PM IST

ಕೋಲಾರ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 2 ನಗರಸಭೆ, ಅಬಕಾರಿ ಆಯುಕ್ತರ ಕಚೇರಿ ಹಾಗೂ ಪೊಲೀಸ್ ಠಾಣೆ ಸೀಲ್​ಡೌನ್ ಮಾಡಲಾಗಿದೆ.

ನಗರಸಭೆಯ 55 ವರ್ಷದ ಪೌರಾಯುಕ್ತರಿಗೆ ಸೋಂಕು ದೃಢಪಟ್ಟಿದ್ದು, ಅವರ ಪತ್ನಿಯ ಕೋವಿಡ್​ ವರದಿಯೂ ಸಹ ಪಾಸಿಟಿವ್ ಬಂದಿದೆ.

ಇದರಿಂದಾಗಿ ಕೋಲಾರ ನಗರಸಭೆ ಹಾಗೂ ಪೌರಾಯುಕ್ತರ ಮನೆ ಸೀಲ್​ಡೌನ್ ಮಾಡಲಾಗಿದೆ. ಜೊತೆಗೆ ನಗರಸಭೆ ಸದಸ್ಯರು, ಪೌರ ಕಾರ್ಮಿಕರು ಹಾಗೂ ಅಧಿಕಾರಿಗಳಲ್ಲಿ ಆತಂಕ ಹೆಚ್ಚಾಗಿದೆ. ಕೆಜಿಎಫ್ ನಗರಸಭೆಯ 50 ವರ್ಷದ ಪೌರ ಕಾರ್ಮಿಕನಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಪೌರ ಕಾರ್ಮಿಕ ವಾಸವಿದ್ದ ಮನೆ ಹಾಗೂ ನಗರಸಭೆ ಸೀಲ್​ಡೌನ್ ಮಾಡಲಾಗಿದೆ.

ಕೋಲಾರದ ಗಲ್‌ಪೇಟೆ ಪೊಲೀಸ್​ ಕಾನ್ಸ್​ಟೇಬಲ್​ಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಗಲ್‌ಪೇಟೆ ಪೊಲೀಸ್ ಠಾಣೆಯನ್ನು ಮೂರು ದಿನಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ. ಅಬಕಾರಿ ಇಲಾಖೆಯ ನಾಲ್ಕು ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಕೋಲಾರ ಅಬಕಾರಿ ಆಯುಕ್ತರ ಕಚೇರಿಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ.

ABOUT THE AUTHOR

...view details