5 ಲಕ್ಷಕ್ಕೆ ಗ್ರಾಮ ಪಂಚಾಯಿತಿ ಸದಸ್ಯತ್ವ ಹರಾಜು ಹಾಕಿದ ಗ್ರಾಮಸ್ಥರು - ಕೋಲಾರ ಗ್ರಾಪಂ ಸದಸ್ಯರ ಹರಾಜು
15:39 December 10
5 ಲಕ್ಷಕ್ಕೆ ಗ್ರಾಮ ಪಂಚಾಯಿತಿ ಸದಸ್ಯತ್ವ ಹರಾಜು ಹಾಕಿದ ಗ್ರಾಮಸ್ಥರು
ಕೋಲಾರ:ಗ್ರಾಮ ಪಂಚಾಯಿತಿ ಸದಸ್ಯತ್ವ ಸ್ಥಾನವನ್ನು ಹರಾಜು ಹಾಕಿರುವ ಘಟನೆ ಕೋಲಾರ ತಾಲೂಕಿನ ಮದ್ದೇರಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಬೆದ್ಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಬೆದ್ಲಿ ಗ್ರಾಮಸ್ಥರೆಲ್ಲರೂ ಒಂದೆಡೆ ಸೇರಿ ಸಭೆ ನಡೆಸುವ ಮೂಲಕ ಗ್ರಾಮ ಪಂಚಾಯಿತಿ ಸದಸ್ಯತ್ವ ಸ್ಥಾನವನ್ನು ಹರಾಜು ಹಾಕಿದ್ದಾರೆ. ಒಂದು ಲಕ್ಷದ ಇಪ್ಪತ್ತು ಸಾವಿರದಿಂದ ಹರಾಜು ಪ್ರಕ್ರಿಯೆ ಆರಂಭವಾಗಿತ್ತು. ಕೊನೆಗೆ ಐದು ಲಕ್ಷಕ್ಕೆ ಹರಾಜು ಕೂಗಿದ ಶ್ರೀರಾಮಪ್ಪ ಎಂಬುವವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಗ್ರಾಮದ ಕೆಲವರು ಹರಾಜು ಪ್ರಕ್ರಿಯೆ ಕುರಿತಾಗಿ ಅಸಮಾಧಾನ ಹೊರಹಾಕಿದ್ದು, ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಂಡ್ಯ, ಬಳ್ಳಾರಿ, ಕಲಬುರಗಿ ಜಿಲ್ಲೆಯಲ್ಲೂ ಹರಾಜು ನಡೆದಿರುವುದು ಈ ಮೊದಲು ಬೆಳಕಿಗೆ ಬಂದಿತ್ತು.