ಕರ್ನಾಟಕ

karnataka

ETV Bharat / state

ಕೋಲಾರ:  ಚೀನಾ ಸಿಲ್ಕ್​ ಆಮದು ಸ್ಥಗಿತಗೊಳಿಸುವಂತೆ ರೈತರ ಪ್ರತಿಭಟನೆ, ಕ್ಸಿ ಪ್ರತಿಕೃತಿ ದಹನ - ರೈತರ ಪ್ರತಿಭಟನೆ

ಚೀನಾ ರೇಷ್ಮೆ ಅಮದನ್ನು ನಿಲ್ಲಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ‌ ಮತ್ತು ಹಸಿರು ಸೇನೆ ಕಾರ್ಯಕರ್ತರು ಚೀನಾ ಅಧ್ಯಕ್ಷ ಕ್ಸಿ ಜಿನ್​​ಪಿಂಗ್​ ಪ್ರತಿಕೃತಿ ದಹಿಸಿ ಪ್ರತಿಭಟನೆ ಮಾಡಿದರು.

kolar-farmers-protest-to-stop-chinas-silk-import
ಕರ್ನಾಟಕ ರಾಜ್ಯ ರೈತ ಸಂಘ‌ ಮತ್ತು ಹಸಿರು ಸೇನೆ

By

Published : Jul 3, 2020, 4:33 PM IST

ಕೋಲಾರ: ನಗರದಲ್ಲಿ ಚೀನಾ ರೇಷ್ಮೆ ಆಮದು ನಿರ್ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ‌ ಮತ್ತು ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಚೀನಾ ದೇಶದ ರೇಷ್ಮೆಯ ಅಮದು ಸ್ಥಗಿತಗೊಳಿಸುವಂತೆ ರೈತರ ಪ್ರತಿಭಟನೆ

ಭಾರತ ದೇಶ ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ರೇಷ್ಮೆ ನಿರ್ಬಂಧಿಸಿ ಸ್ವದೇಶಿ ರೇಷ್ಮೆಗೆ ಆದ್ಯತೆ ನೀಡುವ ಮೂಲಕ ಚೀನಾಗೆ ಬುದ್ದಿ ಕಲಿಸಬೇಕು ಎಂದು ಆಗ್ರಹಿಸಿದರು. ನಮ್ಮ 20 ಯೋಧರ ಬಲಿ ಪಡೆದ ಚೀನಾದ ರೇಷ್ಮೆ ಆಮದು ನಿರ್ಬಂಧಿಸುವ ಮೂಲಕ ಆರ್ಥಿಕ ಹೊಡೆತ ನೀಡಬೇಕೆಂ1ದು ಒತ್ತಾಯಿಸಿದರು.

ಬೇಡಿಕೆ ಈಡೇರಿಸದಿದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡುವ ಜೊತೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಪ್ರತಿಕೃತಿಯನ್ನು ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details