ಕೋಲಾರ:ಸರ್ಕಾರ ಮತ್ತು ಜಿಲ್ಲಾಡಳಿತದ ಆದೇಶಕ್ಕೂ ಕೇರ್ ಮಾಡದೆ ಕೋಲಾರದಲ್ಲಿ ಶಿಕ್ಷಣ ಸಂಸ್ಥೆಯೊಂದು ಶಾಲೆಯನ್ನು ನಡೆಸುತ್ತಿದೆ.
ಸರ್ಕಾರದ ಆದೇಶಕ್ಕೂ ಕೇರ್ ಮಾಡದ ಕೋಲಾರದ ಶಿಕ್ಷಣ ಸಂಸ್ಥೆ.. ಮಕ್ಕಳ ಜೀವದ ಜತೆಗೆ ಚೆಲ್ಲಾಟ!
ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಂದು ವಾರಗಳ ಕಾಲ ಶಾಲೆ, ಬಾರ್, ಧಾರ್ಮಿಕ ಕಾರ್ಯಕ್ರಮ, ಮಾಲ್‍ಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿದೆ. ಆದರೆ, ರವಿ ಶಿಕ್ಷಣ ಸಂಸ್ಥೆ ಈ ಆದೇಶಗಳನ್ನು ಗಾಳಿಗೆ ತೂರಿ ಮಕ್ಕಳಿಗೆ ಪರೀಕ್ಷೆ ನಡೆಸುತ್ತಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಂದು ವಾರಗಳ ಕಾಲ ಶಾಲೆ, ಬಾರ್, ಧಾರ್ಮಿಕ ಕಾರ್ಯಕ್ರಮ, ಮಾಲ್‍ಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಕೋಲಾರದ ಜಿಲ್ಲಾಡಳಿತ ಸಹ ಪ್ರತ್ಯೇಕವಾಗಿ ಆದೇಶ ಹೊರಡಿಸಿ 1 ರಿಂದ 6ನೇ ತರಗತಿವರೆಗಿನ ಶಾಲೆಗಳಿಗೆ ರಜೆ ಘೋಷಿಸಿ ಆದೇಶಿಸಿದೆ. ಆದರೆ, ರವಿ ಶಿಕ್ಷಣ ಸಂಸ್ಥೆ ಈ ಆದೇಶಗಳನ್ನೆಲ್ಲ ಗಾಳಿಗೆ ತೂರಿ, ಮಕ್ಕಳಿಗೆ ಪರೀಕ್ಷೆ ನಡೆಸುತ್ತಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯಾದ್ಯಂತ ಬಹುತೇಕ ಶಾಲೆಗಳಿಗೆ ರಜೆ ನೀಡಿದರೂ ಸಹ ಇಲ್ಲಿನ ರವಿ ಡಿಗ್ರಿ ಕಾಲೇಜು ಚಿಕ್ಕ ಮಕ್ಕಳಿಗೆ ಪರೀಕ್ಷೆ ನಡೆಸುತ್ತಿದ್ದರೆ, ಮತ್ತೊಂದು ಕಡೆ ಕಾಲೇಜು ವಿದ್ಯಾರ್ಥಿಗಳು ಫುಡ್ ಫೆಸ್ಟಿವಲ್ ನಡೆಸಿದೆ.