ಕರ್ನಾಟಕ

karnataka

ETV Bharat / state

ಆಂಧ್ರ ಸರ್ಕಾರ ಕರೆದುಕೊಳ್ಳದ ಮೀನುಗಾರರಿಗೆ ಕೋಲಾರ ಜಿಲ್ಲಾಡಳಿತದಿಂದ ವ್ಯವಸ್ಥೆ

ಮಂಗಳೂರಿನಿಂದ ಬಂದಂತಹ ಆಂಧ್ರ ಮೂಲದ ಮಿನುಗಾರರನ್ನು ರಾಜ್ಯಕ್ಕೆ ಕರೆದುಕೊಳ್ಳಲು ಅಲ್ಲಿನ ಸರ್ಕಾರ ನಿರಾಕರಿಸಿದ್ದು, ಕೋಲಾರ ಜಿಲ್ಲಾಡಳಿತ ಅವರಿಗೆ ಸೂರಿನ ವ್ಯವಸ್ಥೆ ಕಲ್ಪಿಸಿದೆ.

Kolar District commission gave place to Andhra fishermens
ಆಂಧ್ರ ಸರ್ಕಾರ ಕರೆದುಕೊಳ್ಳದ ಮೀನುಗಾರರಿಗೆ ವ್ಯವಸ್ಥೆ ಕಲ್ಪಿಸಿದ ಕೋಲಾರ ಜಿಲ್ಲಾಡಳಿತ

By

Published : Mar 28, 2020, 12:39 PM IST

ಕೋಲಾರ :ಮಂಗಳೂರಿನಿಂದ ಬಂದಂತಹ ಆಂಧ್ರ ಮೂಲದ ಮಿನುಗಾರರನ್ನು ಆಂಧ್ರ ಸರ್ಕಾರ ಒಳ ಕರೆದುಕೊಳ್ಳದ ಪರಿಣಾಮ ಮೀನುಗಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಆಂಧ್ರ ಸರ್ಕಾರ ಕರೆದುಕೊಳ್ಳದ ಮೀನುಗಾರರಿಗೆ ವ್ಯವಸ್ಥೆ ಕಲ್ಪಿಸಿದ ಕೋಲಾರ ಜಿಲ್ಲಾಡಳಿತ

ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗಡಿಯಲ್ಲಿ ಮಂಗಳೂರಿಂದ ಬಂದ ಮೀನುಗಾರರು ಆಂಧ್ರಪ್ರದೇಶ ಮೂಲದವರಾಗಿದ್ದು, ಅಲ್ಲಿನ ಸರ್ಕಾರ ಮೀನುಗಾರರನ್ನು ಕರೆದುಕೊಳ್ಳಲು ನಿರಾಕರಿಸುತ್ತಿದೆ. ಇದರಿಂದ ರಾಜ್ಯದ ಗಡಿಯಲ್ಲಿ ಮೀನುಗಾರರು ಪರದಾಟ ನಡೆಸುತ್ತಿದ್ದು, ಕೋಲಾರ ಜಿಲ್ಲಾಡಳಿತ ನೆರವಿಗೆ ಬಂದಿದೆ.

ಸುಮಾರು 1,500 ಮೀನುಗಾರರಿಗೆ ಜಿಲ್ಲಾಡಳಿತ ತಾತಿಕಲ್ ಗ್ರಾಮದ ಆದರ್ಶ ಶಾಲೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದು, ಇವರಲ್ಲಿ ಕೊರೊನಾ ಸೋಂಕು ಇರುವ ಬಗ್ಗೆ ಆತಂಕಗೊಂಡಿರುವ ಗ್ರಾಮಸ್ಥರು ಜಿಲ್ಲಾಡಳಿತ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಂಧ್ರಪ್ರದೇಶದ ವಿವಿಧ ಜಿಲ್ಲೆಗಳಿಗೆ ಸೇರಿದ 2 ಸಾವಿರ ಮಂದಿ ಸುಮಾರು 50 ಬಸ್ಸುಗಳಲ್ಲಿ ಮುಳಬಾಗಿಲು ತಾಲೂಕಿನ ನಂಗಲಿಯ ಜೆಎಸ್ಆರ್ ಟೋಲ್ ಸಮೀಪ ಆಂಧ್ರ ಪ್ರವೇಶಿಸಲು ನಿನ್ನೆ ಬಂದಿದ್ದರು.

ABOUT THE AUTHOR

...view details