ಕೋಲಾರ:ಬೆಳ್ಳಂ ಬೆಳಗ್ಗೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಸಿಟಿ ರೌಂಡ್ಸ್ ಮಾಡುವ ಮೂಲಕ ಶುಚಿತ್ವ ಕಾಪಾಡದ ಅಂಗಡಿ ಮಾಲೀಕರಿಗೆ ಬಿಸಿ ಮುಟ್ಟಿಸಿದ್ರು.
ಬೆಳ್ಳಂಬೆಳಗ್ಗೆ ಜಿಲ್ಲಾಧಿಕಾರಿ ಸಿಟಿ ರೌಂಡ್ಸ್: ಶುಚಿತ್ವ ಕಾಪಾಡುವಂತೆ ಅಂಗಡಿ ಮಾಲೀಕರಿಗೆ ವಾರ್ನಿಂಗ್ - ಸ್ವಚ್ಛತೆ ಕಾಪಾಡುವಂತೆ ಅಂಗಡಿ ಮಾಲೀಕರಿಗೆ ಕೋಲಾರ ಡಿಸಿ ಸೂಚನೆ
ಕೋಲಾರ ಜಿಲ್ಲಾಧಿಕಾರಿ ಸತ್ಯಭಾಮ ಇಂದು ಬೆಳಗ್ಗೆ ಸಿಟಿ ಪ್ರದಕ್ಷಿಣೆ ಹಾಕಿದ್ರು. ಈ ವೇಳೆ, ಅಂಗಡಿಗಳ ಮುಂದೆ ಸ್ವಚ್ಛತೆ ಕಾಪಾಡದ ಮಾಲೀಕರಿಗೆ ಕ್ಲಾಸ್ ತೆಗೆದುಕೊಂಡ್ರು. ಇನ್ಮುಂದೆ ಅಂಗಡಿಗಳ ಮುಂದೆ ಕಸ ಇದ್ದರೆ 10 ಸಾವಿರ ರೂಪಾಯಿ ದಂಡ ಹಾಕುವಂತೆ ನಗರಸಭೆ ಸಿಬ್ಬಂದಿಗೆ ಸೂಚಿಸಿದ್ರು.
ಕೋಲಾರದಲ್ಲಿ ಬೆಳಗ್ಗೆಯ ಫೀಲ್ಡ್ಗೆ ಇಳಿದ ಜಿಲ್ಲಾಧಿಕಾರಿ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಅಲ್ಲದೇ ನಗರದ ಅಂತರಗಂಗೆ ರಸ್ತೆಯಲ್ಲಿರುವ ಬೇಕರಿಯೊಂದನ್ನ ಪರಿಶೀಲಿಸಿದ ಅವರು ಬೇಕರಿ ಮುಂದೆ ಡಸ್ಟ್ ಬಿನ್ ಇಡದ ಕಾರಣ ಬೇಕರಿ ಮಾಲೀಕನಿಗೆ ಅವಾಜ್ ಹಾಕಿದ್ರು. ಜೊತೆಗೆ ಬೇಕರಿ ಮುಂದೆ ಶುಚಿತ್ವ ಕಾಪಾಡುವಂತೆ ಎಚ್ಚರಿಕೆ ನೀಡಿದ್ರು.
ಇನ್ನು ಅಂಗಡಿಗಳ ಮುಂದೆ ಸ್ವಚ್ಚತೆ ಕಾಪಾಡದ ಮಾಲೀಕರಿಗೆ ವಾರ್ನಿಂಗ್ ಮಾಡಿದ್ರು. ಅಂಗಡಿಗಳ ಮುಂದೆ ಕಸವಿದ್ದರೆ 10 ಸಾವಿರ ರೂ. ದಂಡ ಹಾಕಲು ನಗರಸಭೆ ಸಿಬ್ಬಂದಿಗೆ ಸೂಚಿಸಿದ್ರು. ಇನ್ನು ಹೊಸ ಬಸ್ ನಿಲ್ದಾಣ, ಅಂತರಗಂಗೆ ರಸ್ತೆ, ಎಂ.ಬಿ.ರಸ್ತೆಗಳ ಪರಿಶೀಲನೆ ನಡೆಸಿ ಎಲ್ಲ ಅಂಗಡಿ ಮಾಲೀಕರಿಗೆ ಶುಚಿತ್ವದ ಪಾಠ ಮಾಡಿದ್ರು. ಈ ವೇಳೆ, ನಗರಸಭೆ ಆಯುಕ್ತ ಶ್ರೀಕಾಂತ್ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.