ಕೋಲಾರ: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಉಚಿತ ಮಾಸ್ಕ್ಗಳನ್ನು ನೀಡಿ, ಸ್ಯಾನಿಟೈಸರ್ಸ್ ಹೇಗೆ ಬಳಸಬೇಕು, ಕೊರೊನಾ ಭೀತಿಯಿಂದ ಯಾವ ರೀತಿ ಜಾಗೃತರಾಗಿರಬೇಕೆಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.
ಉಚಿತವಾಗಿ 5 ಸಾವಿರ ಮಾಸ್ಕ್ಗಳನ್ನು ಹಂಚಿದ ಕಾಂಗ್ರೆಸ್ ಕಾರ್ಯಕರ್ತರು - ಸ್ಯಾನಿಟೈಸರ್ಸ್ ಹೇಗೆ ಬಳಸಬೇಕು
ಕೊರೊನಾ ಭೀತಿ ಎದುರಾಗಿರುವ ಹಿನ್ನಲೆ ಇಂದು ಕೋಲಾರದಲ್ಲಿ ಕಾಂಗ್ರೆಸ್ನಿಂದ ಉಚಿತ ಮಾಸ್ಕ್ ಹಂಚುವುದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ, ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳಿದ್ದರೂ, ಸಾರ್ವಜನಿಕರಿಗೆ ಉಚಿತ ಮಾಸ್ಕ್ ನೀಡುವಂತಹ ಕೆಲಸ ಮಾಡುತ್ತಿಲ್ಲ. ಮಾಸ್ಕ್ಗಳನ್ನ ದುಬಾರಿ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರೂ ಸರ್ಕಾರಗಳು ಈ ಕುರಿತು ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ರು.
ಇನ್ನು, ಜನರು ಕೊರೊನಾ ವೈರಸ್‍ಗೆ ಭಯಭೀತರಾಗುವುದು ಬೇಡ. ಜಾಗೃತರಾಗಿದ್ದು ಕೆಮ್ಮು, ಶೀತ ಹಾಗೂ ಉಸಿರಾಟದ ತೊಂದರೆ ಇದ್ದಲ್ಲಿ, ಸ್ವಯಂಪ್ರೇರಿತರಾಗಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದರು. ಅಲ್ಲದೆ ಸುಮಾರು 5 ಸಾವಿರ ಮಾಸ್ಕ್ಗಳನ್ನು ಕೋಲಾರ ನಗರದ ಭಾಗದಲ್ಲಿ ಉಚಿತವಾಗಿ ಹಂಚಿಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರಗಳು ಸೇರಿದಂತೆ ಗ್ರಾಮಾಂತರ ಪ್ರದೇಶದ ಜನರಿಗೂ ನೀಡುವುದಾಗಿ ತಿಳಿಸಿದರು.