ಕರ್ನಾಟಕ

karnataka

ETV Bharat / state

ಬಾಲಕನ ಕೊಲೆ ಪ್ರಕರಣ: ತಪ್ಪಿಸಿಕೊಂಡು ಹೋಗುತ್ತಿದ್ದ ಆರೋಪಿಗಳ ಮೇಲೆ ಪೊಲೀಸರ ಫೈರಿಂಗ್ - ಆರೋಪಿಗಳಿಗೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ

ಅಪ್ರಾಪ್ತ ಬಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಬಂಧಿಸುತ್ತಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ, ಆರೋಪಿಗಳ ಮೇಲೆ ಫೈರಿಂಗ್ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

SP Narayana visited Kolar District Hospital.
ಕೋಲಾರ ಜಿಲ್ಲಾಸ್ಪತ್ರೆಗೆ ಎಸ್ಪಿ ನಾರಾಯಣ ಭೇಟಿ ನೀಡಿ ಪೊಲೀಸ್ ಸಿಬ್ಬಂದಿ, ಅಪ್ರಾಪ್ತ ಆರೋಪಿಗಳ ಆರೋಗ್ಯ ವಿಚಾರಿಸಿದರು.

By ETV Bharat Karnataka Team

Published : Nov 9, 2023, 4:43 PM IST

ಕೋಲಾರ: ಬಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಅಪ್ರಾಪ್ತ ಆರೋಪಿಗಳ ಮೇಲೆ‌ ಪೊಲೀಸರು ಫೈರಿಂಗ್‌​ ಮಾಡಿರುವ ಘಟನೆ ಇಂದು ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದ ಬಳಿ ನಡೆದಿದೆ.

ಪೊಲೀಸರು ಪೈರಿಂಗ್ ಮಾಡಿದ್ದ ವೇಳೆ ಇಬ್ಬರು ಅಪ್ರಾಪ್ತ ಆರೋಪಿಗಳ ಎರಡೂ ಕಾಲುಗಳಿಗೆ ಗುಂಡೇಟು ಬಿದ್ದಿದ್ದು, ಗಾಯಗೊಂಡ ಅಪ್ರಾಪ್ತ ಆರೋಪಿಗಳಿಗೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪೊಲೀಸರಿಗೆ ಗಾಯ:ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದ ಬಳಿ ಬಂಧಿಸುವ ವೇಳೆ ಅಪ್ರಾಪ್ತ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಗೈದು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ, ಸಬ್‌ಇನ್ಪೆಕ್ಟರ್ ವಿಠ್ಠಲ್ ತಳವಾರ್ ಅವರು ಪೈರಿಂಗ್ ಮಾಡಿದ್ದು, ಇಬ್ಬರು ಅಪ್ರಾಪ್ತ ಆರೋಪಿಗಳ ಎರಡೂ ಕಾಲುಗಳಿಗೆ ಗುಂಡೇಟು ಬಿದ್ದಿದೆ. ತಕ್ಷಣ ಅಪ್ರಾಪ್ತ ಆರೋಪಿಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.

ಈ ವೇಳೆ, ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡಿದ್ದ ಪಿಎಸ್‌ಐ ವಿಠ್ಠಲ್ ತಳವಾರ್ ಹಾಗೂ ಇಬ್ಬರು ಸಿಬ್ಬಂದಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕೋಲಾರ ಜಿಲ್ಲಾಸ್ಪತ್ರೆಗೆ ಎಸ್ಪಿ ನಾರಾಯಣ ಭೇಟಿ ನೀಡಿದ್ದು, ಕೋಲಾರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವ ಅಪ್ರಾಪ್ತ ಆರೋಪಿಗಳು ಹಾಗೂ ಪೊಲೀಸರ ಆರೋಗ್ಯ ವಿಚಾರಿಸಿದರು.

ಬಾಲಕನ ಕೊಲೆ: ಬಾಲಕನನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಕೋಲಾರದ ಪಿ.ಸಿ (ಪೇಟೆ ಚಾಮನಹಳ್ಳಿ) ಬಡಾವಣೆಯ ಸರ್ಕಾರಿ ಶಾಲಾ ಆವರಣದಲ್ಲಿ ನವೆಂಬರ್ 4ರಂದು ನಡೆದಿತ್ತು.ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಪಿ.ಸಿ ಬಡಾವಣೆಯ ನಿವಾಸಿ ಅರುಣ್​ ಸಿಂಗ್​ ಎಂಬುವರ ಮಗ ಕಾರ್ತಿಕ್​ ಸಿಂಗ್​ ಕೊಲೆಗೀಡಾದ ಬಾಲಕ. ಕೋಲಾರದ ಎಸ್​ ಡಿಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಅಪ್ರಾಪ್ತ ಬಾಲಕ ಕಾರ್ತಿಕ್​, ನವೆಂಬರ್ 4ರಂದು ಹೊಟ್ಟೆ ನೋವು ಅನ್ನೋ ಕಾರಣಕ್ಕೆ ಕಾಲೇಜಿಗೆ ಹೋಗದೇ ಮನೆಯಲ್ಲೆ ಇದ್ದನಂತೆ. ಸಂಜೆ ವೇಳೆ ಯಾರೋ ಸ್ನೇಹಿತರು ಕರೆ ಮಾಡಿ ಬಾ ಅಂದಿದ್ದಾರೆ. ಹಾಗಾಗಿ 5.30ರ ಸುಮಾರಿಗೆ ಕಾರ್ತಿಕ್​ ಮನೆಯಿಂದ ಹೊರ ಹೋಗಿದ್ದಾನೆ.

ಸುಮಾರು 7 ಗಂಟೆ ಸುಮಾರಿಗೆ ಆತನ ಮೊಬೈಲ್​ ಫೋನ್​ ಸ್ವಿಚ್ಡ್​​ ಆಫ್​ ಆಗಿತ್ತು. ಎಲ್ಲೋ ಹೋಗಿರಬೇಕು, ಬರ್ತಾನೆ ಎಂದುಕೊಂಡು ಮನೆಯವರು ಕೂಡ ಸುಮ್ಮನಾಗಿದ್ದರು. ಆದರೆ, ಸುಮಾರು 9 ಗಂಟೆಗೆ ವ್ಯಕ್ತಿಯೊಬ್ಬರು, ನಿಮ್ಮ ಮಗನನ್ನು ಹೊಡೆದು ಹಾಕಿ ಕೊಲೆ ಮಾಡಿದ್ದಾರೆಂದು ಮನೆಯವರಿಗೆ ತಿಳಿಸಿದ್ದಾರೆ. ಕೂಡಲೇ ಶಾಲೆ ಬಳಿ ಬಂದ ಕುಟುಂಬಸ್ಥರು ಕಾರ್ತಿಕ್​ ಕೊಲೆಯಾಗಿರುವುದನ್ನು ಕಂಡು ಬೆಚ್ಚಿಬಿದ್ದಿದ್ದರು. ಕೋಲಾರ ನಗರ ಪೊಲೀಸ್​ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದರು.

ಇದಕ್ಕೂ ಮುನ್ನ, ಪಿ.ಸಿ ಬಡವಾಣೆ ಹಾಗೂ ಆರೋಹಳ್ಳಿ ಏರಿಯಾದ ಕೆಲವು ಹುಡುಗರ ಗ್ಯಾಂಗ್​​ನೊಂದಿಗೆ ಸ್ನೇಹ ಮಾಡಿದ್ದ ಕಾರ್ತಿಕ್,​ ಕಳೆದ ಕೆಲವು ದಿನಗಳ ಹಿಂದೆ ಅದೇ ಗ್ಯಾಂಗ್ ಹುಡುಗರಿಂದ ಏಟು ತಿಂದು ಗಲಾಟೆಯಾಗಿ ಪ್ರಕರಣ ಪೊಲೀಸ್​ ಠಾಣೆಯ ಮೆಟ್ಟಿಲೇರಿತ್ತು.

ಇದನ್ನೂಓದಿ:ಟೀ ಕುಡಿಯಲು ಬಂದಾಗ ಅಟ್ಯಾಕ್: ಬೆಂಗಳೂರಲ್ಲಿ ರೌಡಿಶೀಟರ್ ಬರ್ಬರ ಹತ್ಯೆ

ABOUT THE AUTHOR

...view details