ಕೋಲಾರ:ಸಾಲ ಮರು ಪಾವತಿಸದ ಕಾರಣ ಎನ್ಒಸಿ ನೀಡದ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದಿದೆ. ಈ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಹಕಾರ ಸಂಘದ ಸಿಇಒ ಸುಧಾಕರ್ ಮೇಲೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಇಂದುಮಂಗಲ ಗ್ರಾಮದ ನಾರಾಯಣಸ್ವಾಮಿ ಎಂಬಾತ ಹಲ್ಲೆ ನಡೆಸಿದ್ದಾನೆ. ಈಗಾಗಲೇ ತೆಗೆದುಕೊಂಡಿದ್ದ ಸಾಲ ಮರುಪಾವತಿ ಮಾಡದೇ ಎನ್ಒಸಿಗೆ ಸೀಲ್ ಹಾಕುವಂತೆ ಸಿಬ್ಬಂದಿ ಮೇಲೆ ನಾರಾಯಣಸ್ವಾಮಿ ಒತ್ತಡ ಹಾಕಿದ್ದಾನೆ ಎನ್ನಲಾಗಿದೆ.