ಕೋಲಾರ:ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಮೇ - 23 ಶನಿವಾರ ಮಧ್ಯಾಹ್ನದಿಂದ ಮೇ-24 ಭಾನುವಾರದವರೆಗೆ ಯಾವುದೇ ವ್ಯಾಪಾರ ವಹಿವಾಟು ನಡೆಯುವುದಿಲ್ಲ .
ಶನಿವಾರದಿಂದ ಭಾನುವಾರದವರೆಗೆ ಕೋಲಾರ ಎಪಿಎಂಸಿ ಬಂದ್..! - ಏಷ್ಯಾದಲ್ಲಿಯೇ ಎರಡನೇ ದೊಡ್ಡ ಮಾರುಕಟ್ಟೆ
ಏಷ್ಯಾದಲ್ಲಿಯೇ ಎರಡನೇ ದೊಡ್ಡ ಮಾರುಕಟ್ಟೆ ಜಿಲ್ಲೆಯ ಎಪಿಎಂಸಿಯಲ್ಲಿ ಮೇ-23 ಶನಿವಾರ ಮಧ್ಯಾಹ್ನದಿಂದ ಮೇ-24 ಭಾನುವಾರದವರೆಗೆ ಯಾವುದೇ ವ್ಯಾಪಾರ ವಹಿವಾಟು ನಡೆಯುವುದಿಲ್ಲ ಎಂದು ಎಪಿಎಂಸಿ ಮಾರುಕಟ್ಟೆ ಅಧ್ಯಕ್ಷ ವಡಗೂರ್ ನಾಗರಾಜ್ ತಿಳಿಸಿದ್ದಾರೆ.

ಕೋಲಾರದ ಎಪಿಎಂಸಿ ಮಾರುಕಟ್ಟೆ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಇಂದಿನಿಂದ 144 ಸೆಕ್ಷನ್ ಜಾರಿಯಾಗಿದೆ. ಶನಿವಾರ ಮಧ್ಯಾಹ್ನವೇ ಮಾರುಕಟ್ಟೆ ಬಂದ್ ಆಗಲಿದ್ದು, ಇಡೀ ಭಾನುವಾರ ಮಾರುಕಟ್ಟೆಯಲ್ಲಿ ನಿಷೇಧಾಜ್ಞೆ ಜಾರಿಯಾಗಲಿದ್ದು, ರೈತರು ಸಹಕರಿಸಬೇಕೆಂದು ಮನವಿ ಮಾಡಿದರು.
ಇನ್ನು ಮುಂದಿನ ಮೇ-23 ಹಾಗೂ 24 ಶನಿವಾರ ಭಾನುವಾರ ಯಥಾಪ್ರಕಾರ ನಿಷೇಧಾಜ್ಞೆ ಜಾರಿಯಾಗಲಿದೆ ಎಂದರು. ಇನ್ನು ಈಗಾಗಲೇ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ಲೀನಿಂಗ್ ಮಾಡಲಾಗುತ್ತಿದೆ. ಅಲ್ಲದೇ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಮಾರುಕಟ್ಟೆಯಲ್ಲಿನ ಮಂಡಿಗಳಲ್ಲಿ ಪ್ರತಿಯೊಬ್ಬರಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ಕಡ್ಡಾಯ ಮಾಡಲಾಗಿದೆ ಎಂದರು.