ಕೋಲಾರ: ಶ್ರೀರಾಮ ಸೇನೆ, ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಕೋಲಾರ ಹೊರವಲಯದ ಪೂಜಾ ಕಲ್ಯಾಣ ಮಂಟಪದ ಬಳಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಆರು ಕರುಗಳನ್ನ ರಕ್ಷಣೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ: ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 6 ಕರುಗಳ ರಕ್ಷಣೆ - ಕೋಲಾರ ನ್ಯೂಸ್
ಕೋಲಾರ ತಾಲೂಕಿನ ವಕ್ಕಲೇರಿ ಸುತ್ತಮುತ್ತಲಿನಿಂದ ಕೋಲಾರದಲ್ಲಿನ ಕಸಾಯಿಖಾನೆಗೆ ಅಕ್ರಮವಾಗಿ ಕರುಗಳನ್ನು ಸಾಗಿಸಲಾಗುತ್ತಿತ್ತು. ನವಜಾತ ಕರು ಸೇರಿದಂತೆ ಆರು ಕರುಗಳನ್ನ ಗೋಣಿ ಚೀಲದಲ್ಲಿ ತುಂಬಿ ಆಟೋದಲ್ಲಿ ಸಾಗಿಸುತ್ತಿದ್ದ ವಿಚಾರ ತಿಳಿದ ಸಂಘಟನೆಗಳ ಕಾರ್ಯಕರ್ತರು, ಮಾರ್ಗ ಮಧ್ಯದಲ್ಲಿ ತಡೆದು ಕರುಗಳನ್ನು ರಕ್ಷಣೆ ಮಾಡಿದ್ದಾರೆ.

ಕೋಲಾರ ನಗರದಲ್ಲಿ ಅಕ್ರಮ ಕಸಾಯಿಖಾನೆಗಳು ತಲೆಯೆತ್ತಿದ್ದು, ಜಿಲ್ಲಾಡಳಿತ ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಗೋ ರಕ್ಷಕರು ಒತ್ತಾಯಿಸಿದ್ದಾರೆ. ಸದ್ಯ ಕರುಗಳು, ಆಟೋ ಸೇರಿದಂತೆ ಚಾಲಕನನ್ನು ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.