ಕೋಲಾರ:ಇವಿಎಂ ಮತಯಂತ್ರಗಳ ಕುರಿತು ಸಂಶಯ ಪಡುವಂತಹವರನ್ನ ಜೈಲಿಗೆ ಹಾಕಬೇಕು ಎಂದು ಇವಿಎಂ ದೋಷ ಎಂದು ಹೇಳಿಕೆ ನೀಡಿದ್ದ ಕೆ.ಹೆಚ್.ಮುನಿಯಪ್ಪ ಅವರಿಗೆ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಟಾಂಗ್ ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಗೆಲುವು ಸಾಧಿಸಲು ಇವಿಎಂ ದೋಷ ಕಾರಣ ಎಂಬ ಕೆ.ಹೆಚ್.ಮುನಿಯಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಮಂಜುನಾಥ್, ಮುಳಬಾಗಿಲು ಕ್ಷೇತ್ರದಲ್ಲಿ 85 ಸಾವಿರ ಲೀಡ್ ಬರಬೇಕಿತ್ತು. ಅದ್ರೆ ಇವಿಎಂ ಸರಿ ಇದ್ದಿಲ್ಲ ಅನಿಸುತ್ತೆ. ಅದಕ್ಕೆ ಮುನಿಯಪ್ಪ ಈ ಹೇಳಿಕೆ ನೀಡಿದ್ದಾರೆ ಎಂದು ವ್ಯಂಗ್ಯವಾಡಿದ್ರು. ಇನ್ನು ಇವಿಎಂ ಕುರಿತು ಸಂಶಯಪಡುವವರನ್ನ ಜೈಲಿಗೆ ಹಾಕಬೇಕು ಎಂದು ಕಿಡಿಕಾರಿದರು.
ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅಲ್ಲದೆ ಕಳೆದ ಬಾರಿ ಗೆದ್ದಾಗ ಹಾಗೂ ಕೆಜಿಎಫ್ನಲ್ಲಿ ತಮ್ಮ ಮಗಳು ಗೆದ್ದಾಗ ಇವಿಎಂ ಸರಿಯಾಗಿತ್ತಾ ಎಂದು ಪ್ರಶ್ನೆ ಮಾಡಿದ್ರು. ಇನ್ನು ಕೊಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸರ್ವನಾಶವಾಗಲು ಕಾರಣ ಮುನಿಯಪ್ಪ ಹಾಗೂ ಅವರ ಬೆಂಬಲಿಗರು. ಇವತ್ತು ಮುನಿಯಪ್ಪ ಅವರು ಸೋಲುವುದಕ್ಕೆ ಕಾರಣ ಅವರನ್ನ ಕೆಟ್ಟ ದಾರಿಗೆ ಎಳೆದುಕೊಂಡು ಹೋದ ಅವರ ಶಿಷ್ಯರು ಎಂದರು.
ಇನ್ನು ಕೆ.ಹೆಚ್.ಮುನಿಯಪ್ಪ ಅವರು ಏಳು ಬಾರಿ ಗೆದ್ದರೂ ಈಗಿನ ಲೀಡ್ ಯಾವ ಬಾರಿಯೂ ಅವರಿಗೆ ಬಂದಿಲ್ಲ. ಅವರು ಇನ್ನೊಬ್ಬರ ಮಾತು ಕೇಳಿಕೊಂಡು ನಮಗೆ ಅನ್ಯಾಯ ಮಾಡಿದ್ದಾರೆ. ಅದೇ ಅನ್ಯಾಯ ಮಾಡದಿದ್ದರೆ ಇವತ್ತು ಅವರು ಗೆಲ್ಲುತ್ತಿದ್ದರು. ಮುನಿಯಪ್ಪರಿಗೆ ಈ ಸೋಲಿನಿಂದ ಪಾಠ ಆಗಿದೆ. ಇನ್ನು ಮುಂದೆಯಾದರು ಇನ್ನೊಬ್ಬರನ್ನ ತುಳಿಯುವುದನ್ನ ಬಿಡಬೇಕು ಎಂದರು.