ಕರ್ನಾಟಕ

karnataka

ETV Bharat / state

ಅಂದು ಮುನಿಯಪ್ಪರನ್ನು ಮುಗಿಸಿದ್ರಿ, ಈಗ ಸಿದ್ದರಾಮಯ್ಯ ಸರದಿ.. ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಖಲೀಲ್ ಕಿಡಿ - ಜೆಡಿಎಸ್ ಅಲ್ಪಸಂಖ್ಯಾತರ ಮುಖಂಡ ಖಲೀಲ್ ಅಹ್ಮದ್

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಜೆಡಿಎಸ್ ಅಲ್ಪಸಂಖ್ಯಾತರ ಮುಖಂಡ ಖಲೀಲ್ ಅಹ್ಮದ್ ವಾಗ್ದಾಳಿ.

Khalil Ahmed
ಖಲೀಲ್ ಅಹ್ಮದ್

By

Published : Nov 12, 2022, 2:16 PM IST

ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಿಜೆಪಿಯೊಂದಿಗೆ ಶಾಮೀಲಾಗಿ ಕೆ.ಹೆಚ್ ಮುನಿಯಪ್ಪ ಅವರನ್ನು ಮುಗಿಸಿದರು. ಇದೀಗ ಸಿದ್ದರಾಮಯ್ಯ ಅವರನ್ನ ಕೋಲಾರಕ್ಕೆ ಕರೆತಂದು ಮುಗಿಸಲು ಹೊರಟಿದ್ದಾರೆ ಎಂದು ನಗರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಜೆಡಿಎಸ್ ಅಲ್ಪಸಂಖ್ಯಾತರ ಮುಖಂಡ ಖಲೀಲ್ ಅಹ್ಮದ್ ಆರೋಪಿಸಿದರು.

ಕೋಲಾರ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ನಿಕ್ಕರ್ ಸ್ವಾಮಿ ಎಂದು ಲೇವಡಿ ಮಾಡಿದರು. ಶ್ರೀನಿವಾಸಪುರದಲ್ಲಿ ಸೋಲುವ ಭೀತಿಯಿಂದಾಗಿ, ಒಕ್ಕಲಿಗರು ಹಾಗೂ ಅಲ್ಪಸಂಖ್ಯಾತರು ನಮ್ಮ ಪರವಾಗಿ ಇದ್ದಾರೆ ಎಂದು ಸಿದ್ದರಾಮಯ್ಯ ಅವರನ್ನು ರಮೇಶ್​ ಕುಮಾರ್​​ ಆಹ್ವಾನಿಸುತ್ತಿದ್ದಾರೆ. ಜತೆಗೆ ಆರ್​​ಎಸ್​​ಎಸ್ ನಿಂದ ಸುಪಾರಿ ತೆಗೆದುಕೊಂಡು ಕೆಲಸ ಮಾಡುತ್ತಿರುವ ಇವರು, ಸಿದ್ದರಾಮಯ್ಯ ಅವರನ್ನ ಮುಗಿಸಲು ಮುಂದಾಗಿದ್ದಾರೆ ಎಂದು ದೂರಿದರು.

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರ: ಖಲೀಲ್ ಅಹ್ಮದ್ ಪ್ರತಿಕ್ರಿಯೆ

ಇದೇ ವೇಳೆ ಶಾಸಕ ಶ್ರೀನಿವಾಸ ಗೌಡ ಅವರ ವಿರುದ್ಧವೂ ಖಲೀಲ್ ಅಹ್ಮದ್ ಏಕ ವಚನದಲ್ಲಿ‌ ವಾಗ್ದಾಳಿ ನಡೆಸಿದರು. ಶ್ರೀನಿವಾಸ ಗೌಡ ಅವನಿಗೆ ಕೋಲಾರದಲ್ಲಿ ಏನು ಬಲವಿದೆ?, ಬೈರೇಗೌಡ ಶಿಷ್ಯ ಎಂದು ಹೇಳಿಕೊಂಡು ಜೆಡಿಎಸ್​ನಲ್ಲಿ ಇದ್ದು, ಇದೀಗ ಕಾಂಗ್ರೆಸ್​​ನಲ್ಲಿ ನಾಯಿಯಂತೆ ಇದ್ದಾ‌ನೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಸಿದ್ದರಾಮಯ್ಯ ಕೋಲಾರದ ಕ್ಷೇತ್ರದಲ್ಲಿ ಸ್ಫರ್ಧೆ: ಒಮ್ಮತ ಸೂಚಿಸಿದ ಜಿಲ್ಲೆಯ ಕೈ ಮುಖಂಡರು

ABOUT THE AUTHOR

...view details