ಕೋಲಾರ: ಕೋಲಾರ ಲೋಕಸಭಾ ಚುನಾವಣೆ ಮಹಾಭಾರತ ಇದ್ದ ಹಾಗೆ ಎಂದು ಚಿಂತಾಮಣಿ ಮಾಜಿ ಶಾಸಕ ಸುಧಾಕರ್ ಹೇಳಿದರು.
ದೊಡ್ಡ ಪ್ರಮಾಣದಲ್ಲಿ ಕೋಲಾರಕ್ಕೆ ಹಿಡಿರುವ ಗ್ರಹಣ ಈ ಬಾರಿ ಬಿಡಲಿದೆ: ಮಾಜಿ ಶಾಸಕ ಸುಧಾಕರ್ - KH Muniyappa
1991 ರಿಂದ ಇಲ್ಲಿಯವರೆಗೆ ದೊಡ್ಡ ಪ್ರಮಾಣದಲ್ಲಿ ಕೋಲಾರ ಕ್ಷೇತ್ರಕ್ಕೆ ಹಿಡಿದಿರುವ ಗ್ರಹಣವನ್ನು ಈ ಸಲ ಬಿಡಿಸುವ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪನವರನ್ನು ಸೋಲಿಸಬೇಕು ಎಂದು ಕಾರ್ಯಕರ್ತರಲ್ಲಿ ಮಾಜಿ ಶಾಸಕ ಸುಧಾಕರ್ ಮನವಿ ಮಾಡಿದರು.
ಇಂದು ಮಾಲೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಪರ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೋಲಾರ ಕ್ಷೇತ್ರಕ್ಕೆ 1991ರಿಂದ ಇಲ್ಲಿಯವರೆಗೆ ದೊಡ್ಡ ಪ್ರಮಾಣದಲ್ಲಿ ಗ್ರಹಣ ಹಿಡಿದಿದ್ದು, ಈ ಗ್ರಹಣ ಬಿಡುವ ಸಮಯ ಇದೀಗ ಬಂದಿದೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಗ್ರಹಣ ಹಿಡಿದ ನಂತರ ಹೇಗೆ ಮನೆಗಳನ್ನ ಹೊಸದಾಗಿ ಸ್ವಚ್ಛ ಮಾಡುತ್ತೇವೋ ಹಾಗೆಯೇ ಈ ಬಾರಿ ಮುನಿಯಪ್ಪನವರನ್ನ ಮನೆಗೆ ಕಳುಹಿಸುವ ಮೂಲಕ ಕೋಲಾರಕ್ಕೆ ಹಿಡಿದಿರುವ ಗ್ರಹಣವನ್ನ ಬಿಡಿಸಬೇಕು ಎಂದರು. ಇನ್ನು ಕೆ.ಹೆಚ್.ಮುನಿಯಪ್ಪ ಸ್ವಾರ್ಥ ಹಾಗೂ ಕುಟುಂಬ ರಾಜಕರಣ ಮಾಡುವುದರೊಂದಿಗೆ ಈ ಜಿಲ್ಲೆಯ ಹಲವಾರು ನಾಯಕರನ್ನ ಅವರ ಕಾಣದ ಸಂಚಿನಿಂದ ಮುಗಿಸಿದ್ದಾರೆ ಎಂದು ಇದೇ ವೇಳೆ ಆರೋಪಿಸಿದರು.