ಕರ್ನಾಟಕ

karnataka

ETV Bharat / state

ರಸ್ತೆ ಅಗಲೀಕರಣ ವಿಳಂಬ ಖಂಡಿಸಿ ಕೆಜಿಎಫ್ ಶಾಸಕಿ ಏಕಾಂಗಿಯಾಗಿ ಪ್ರತಿಭಟಿಸಲು ನಿರ್ಧಾರ - Protest against PWD department officials

ಕೆಜಿಎಫ್ ನಗರದ ಅಶೋಕ ರಸ್ತೆಯ ಅಗಲೀಕರಣ ಕಾಮಗಾರಿ ಮಾಡುವಂತೆ ಕೋರ್ಟ್ ಆದೇಶವಿದ್ದರೂ ಸಹ 8 ತಿಂಗಳಿಂದ ಕಾಮಗಾರಿ ಮಾಡದೆ ವಿಳಂಬ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ..

KGF MLA decides to protest alone opposing the delay of road widening
ರಸ್ತೆ ಅಗಲೀಕರಣ ವಿಳಂಬ ಖಂಡಿಸಿ ಕೆಜಿಎಫ್ ಶಾಸಕಿ ಏಕಾಂಗಿ ಪ್ರತಿಭಟನೆಗೆ ನಿರ್ಧಾರ

By

Published : Sep 18, 2020, 8:10 PM IST

ಕೋಲಾರ:ರಸ್ತೆ ಅಗಲೀಕರಣ ವಿಳಂಬ ಖಂಡಿಸಿ ವಿಧಾನಸಭೆ ಅಧಿವೇಶನ ಬಹಿಷ್ಕರಿಸುವುದರ ಜೊತೆಗೆ ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ನಾಳೆ ಏಕಾಂಗಿ ಮೌನ ಪ್ರತಿಭಟನೆಗೆ ಕೆಜಿಎಫ್ ಶಾಸಕಿ ನಿರ್ಧಾರ ಮಾಡಿದ್ದಾರೆ.

ರಸ್ತೆ ಅಗಲೀಕರಣ ವಿಳಂಬ ಖಂಡಿಸಿ ಕೆಜಿಎಫ್ ಶಾಸಕಿ ಏಕಾಂಗಿ ಪ್ರತಿಭಟನೆಗೆ ನಿರ್ಧಾರ

ಕೆಜಿಎಫ್ ನಗರದ ರಸ್ತೆ ಕಾಮಗಾರಿ ವಿಳಂಬ ಹಿನ್ನೆಲೆ ಜಿಲ್ಲಾಧಿಕಾರಿ ಹಾಗೂ ಪಿಡಬ್ಯ್ಲೂಡಿ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಶಾಸಕಿ ರೂಪ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.

ಕೋಲಾರ ಜಿಲ್ಲೆ ಕೆಜಿಎಫ್ ಕಾಂಗ್ರೆಸ್ ಶಾಸಕಿ ರೂಪ ಶಶಿಧರ್ ಸೋಮವಾರದಿಂದ ಆರಂಭವಾಗಲಿರುವ ಅಧಿವೇಶನಕ್ಕೆ ಗೈರಾಗುವ ಮೂಲಕ ಪ್ರತಿಭಟನೆಗೆ ನಿರ್ಧಾರ ಮಾಡಿದ್ದಾರೆ. ಕೆಜಿಎಫ್ ನಗರದ ಅಶೋಕ ರಸ್ತೆಯ ಅಗಲೀಕರಣ ಕಾಮಗಾರಿ ಮಾಡುವಂತೆ ಕೋರ್ಟ್ ಆದೇಶವಿದ್ದರೂ ಸಹ 8 ತಿಂಗಳಿಂದ ಕಾಮಗಾರಿ ಮಾಡದೆ ವಿಳಂಬ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಶಾಸಕಿ ಮಳೆಯಲ್ಲೇ ನಿಂತು ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದರು. ಇಂದು ಕೆಜಿಎಫ್ ನಗರದಲ್ಲಿ ಅಶೋಕ ರಸ್ತೆ ನಿವಾಸಿಗಳೊಂದಿಗೆ ಮಾತನಾಡಿದ ಅವರು, ಹಲವು ಬಾರಿ ನಾನಾ ರೀತಿಯ ಹೋರಾಟಗಳನ್ನು ಮಾಡಿದ್ರೂ ರಸ್ತೆ ವಿಸ್ತರಣೆ ಕಾರ್ಯ ಮಾಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

ABOUT THE AUTHOR

...view details